
ತಿರುವನಂತಪುರಂ: ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿ ಐವರು ಕೇರಳ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ನಾಯರ್ ಅವರೊಂದಿಗೆ ತ್ರಿವಾಂಕೂರ್ ದೇವಸ್ವ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಜಿ ರಮಣ್ ನಾಯರ್, ಮಹಿಳಾ ಆಯೋಗದ ಮಾಜಿ ಆಯುಕ್ತೆ ಪ್ರಮಿಳಾ ದೇವಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕರ್ನಾಕುಲಂ, ದಿವಾಕರನ್ ನಾಯರ್ ಮತ್ತು ಮಲಂಕರ ಚರ್ಚ್‌ನ ಥಾಮಸ್ ಜಾನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಪಕ್ಷದ ಸಂಪ್ರದಾಯದಂತೆ ಕೇಸರಿ ಶಾಲು ಹೊದಿಸುವ ಮೂಲಕ ಅಮಿತ್ ಷಾ ನೂತನ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಸದ್ಯ ಒಂದು ದಿನ ಕೇರಳ ಪ್ರವಾಸದಲ್ಲಿರುವ ಅಮಿತ್ ಷಾ, ಶಬರಿಮಲೆ ತೀರ್ಪು ಸಂಬಂಧ ಕೇರಳ ಸರ್ಕಾರವು ಸಮಸ್ಯೆಯನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಮತ್ತು ಆರ್ ಆರ್ಎಸ್ಎಸ್ ಕಾರ್ಯಕರ್ತರನ್ನು ಗುರಿಯಾಗಿಸಿದೆ. ಮುಖ್ಯಮಂತ್ರಿಯನ್ನು ಎಚ್ಚರಿಸುತ್ತಿದ್ದೇನೆ, ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರುವ ನೆಪದಲ್ಲಿ ಭಕ್ತರನ್ನು ಹಿಂಸಿಸಬೇಡಿ ಎಂದು ಕಿಡಿಕಾರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, ಕೇರಳ ಸರ್ಕಾರ ಬಿಜೆಪಿ ಬೆಂಬಲದಿಂದ ಗೆದ್ದಿಲ್ಲ. ಬದಲಾಗಿ ಜನರಿಂದ ಚುನಾಯಿತಗೊಂಡಿದೆ. ಅಮಿತ್ ಷಾ ಅವರ ಹೇಳಿಕೆಯು ಚುನಾವಣೆಯ ತೀರ್ಪಿಗೆ ವಿರುದ್ಧವಾಗಿದೆ ಎಂದು ತಿರುಗೇಟು ನೀಡಿದ್ದರು.
Comments are closed.