ರಾಷ್ಟ್ರೀಯ

ನ್ಯೂಯಾರ್ಕ್ ಪೊಲೀಸರ ಫೇಸ್‌ಬುಕ್ ಪೇಜ್ ನ್ನು ಹಿಂದಿಕ್ಕಿದ ಕೇರಳ ಪೊಲೀಸ್!

Pinterest LinkedIn Tumblr


ತಿರುವನಂತಪುರಂ: ಬೆಂಗಳೂರು ನಗರ ಪೊಲೀಸ್ ಫೇಸ್‌ಬುಕ್ ಪೇಜ್ ಹಿಂದಿಕ್ಕಿರುವ ಕೇರಳ ಪೊಲೀಸ್ ಫೇಸ್‌ಬುಕ್ ಪೇಜ್ 8.20ಲಕ್ಷ ಲೈಕ್ಸ್ ಪಡೆದುಕೊಂಡು ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ವಿಶೇಷವೆಂದರೆ ಈ ಸಂಖ್ಯೆ ನ್ಯೂಯಾರ್ಕ್ ಪೊಲೀಸ್ ಫೇಸ್‌ಬುಕ್ ( 7.38 ಲಕ್ಷ likes) ಪೇಜ್‌ಗಿಂತ ಹೆಚ್ಚಿದೆ.

ಕಳೆದ ಆಗಸ್ಟ್‌ವರೆಗೆ ಬೆಂಗಳೂರು ಸಿಟಿ ಪೊಲೀಸ್ ಪೇಜ್ ಅಗ್ರ ಪೇಜ್‌ಗಳಲ್ಲಿ ಒಂದಾಗಿತ್ತು.

ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬಹಳ ಸಕ್ರಿಯರಾಗಿರುವ ಕೇರಳ ಪೊಲೀಸರು ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡುತ್ತಾರೆ, ಟ್ರೋಲ್ಸ್ ಮತ್ತು ಜಾಗೃತಿ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ.

ತಮ್ಮ ಪೇಜ್‌ನ್ನು ನಂಬರ್ 1 ಮಾಡುವಂತೆ ಫಾಲೋವರ್ಸ್‌ಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ.

ಕೆಲ ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಪೊಲೀಸ್ ಅಧಿಕಾರಿಗಳು ನಮ್ಮ ಪೇಜ್‌ನ್ನು ನಿಭಾಯಿಸಲು ಆಸಕ್ತ ಪೊಲೀಸರಿಂದ ಅರ್ಜಿ ಆಹ್ವಾನಿಸಿದ್ದರು. ಅದಕ್ಕೆ ಸಾಕಷ್ಟು ಸಂಖ್ಯೆಯ ಅರ್ಜಿಗಳು ಬಂದಿದ್ದವು. ಲಿಖಿತ ಪರೀಕ್ಷೆ ನಡೆಸಿ 6 ಮಂದಿಯನ್ನು ಆಯ್ಕೆ ಮಾಡಿದ್ದರು. ಆ ತಂಡವೇ ಈಗ ಪೇಜ್‌ನ್ನು ನಿರ್ವಹಿಸುತ್ತಿದೆ, ಎಂದು ಹೇಳಿದ್ದರು.

Comments are closed.