ರಾಷ್ಟ್ರೀಯ

ಉಗ್ರರ ಜೊತೆ ಗುಂಡಿನ ಚಕಮಕಿಯಲ್ಲಿ ಮೂವರು ಸೈನಿಕರು ಹುತಾತ್ಮ

Pinterest LinkedIn Tumblr


ಜಮ್ಮು ಕಾಶ್ಮೀರ: ಶಸ್ತ್ರಸಜ್ಜಿತರಾದ ಇಬ್ಬರು ಪಾಕಿಸ್ತಾನಿ ಉಗ್ರರು ಭಾರತ-ಪಾಕ್​ ಗಡಿಯೊಳಗೆ ನುಗ್ಗಿ ಮೂವರು ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದಾರೆ.

ಇಂದು ಮಧ್ಯಾಹ್ನ 1.45ಕ್ಕೆ ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್​ಓಸಿ) ಪ್ರವೇಶಿಸಿದ ಪಾಕ್​ ಉಗ್ರರು ಮತ್ತು ಭಾರತೀಯ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.

ದಾಳಿಯ ವೇಳೆ ಭಾರತೀಯ ಸೈನಿಕರು ಇಬ್ಬರು ಉಗ್ರರನ್ನು ಎನ್​ಕೌಂಟರ್​ ಮಾಡಿ ಸದೆಬಡಿದಿದ್ದಾರೆ. ಅವರ ಬಳಿಯಿದ್ದ ಎರಡು ಎಕೆ 47 ಗನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಉದಾಂಪುರದ ಆರ್ಮಿ ಕಮ್ಯಾಂಡ್​ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ.

Comments are closed.