ರಾಷ್ಟ್ರೀಯ

ಪೊಲೀಸ್​ ಅಧಿಕಾರಿ ಮೇಲೆ ಬಿಜೆಪಿ ನಾಯಕನ ಥಳಿತ​

Pinterest LinkedIn Tumblr


ಲಕ್ನೋ: ಪೊಲೀಸ್​ ಅಧಿಕಾರಿಯನ್ನು ಬಿಜೆಪಿ ಪಾಲಿಕೆ ಸದಸ್ಯ ಹೋಟೆಲ್​ವೊಂದರಲ್ಲಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೀರತ್​ನಲ್ಲಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ಹೋಟೆಲ್​ನಲ್ಲಿ ಸಿಬ್ಬಂದಿಗಳ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್​ ಇನ್ಸ್​ಪೆಕ್ಟರ್ ಸುಕ್ಪಾಲ್​ ​ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಪಾಲಿಕೆ ಸದಸ್ಯ ಮನಿಶ್​ ಶರ್ಮಾ ಪೊಲೀಸರನ್ನು ತಳ್ಳಿ, ಹಲ್ಲೆ ಮಾಡಲು ಮುಂದಾಗಿದ್ದಾರೆ.
ಸುಮೊಹದ್ದಿಪೂರ್​ ಪೊಲೀಸ್​ ಠಾಣೆಯ ಮುಖ್ಯಸ್ಥ ಸುಕ್ಪಾಲ್ ಎಂದು ತಿಳಿದು ಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಬಿಜೆಪಿ ಕೌನ್ಸಿಲರ್ ಸೇರಿದಂತೆ ಅವರ ಜೊತೆಇದ್ದವರನ್ನು ಬಂಧಿಸಲಾಗಿದ್ದು, ದೂರು ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸ್​ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ ನಾಯಕನ ಬಂಧನ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ನಾಯಕರು ಪೊಲೀಸರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಅಲ್ಲದೇ ಪೊಲೀಸ್​ ಅಧಿಕಾರಿಯೇ ಮಧ್ಯೆ ಸೇವಿಸಿ ಹೋಟೆಲ್​ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎರಡು ಕಡೆಗಳಿಂದ ಆರೋಪ ಎದುರಾಗಿದ್ದು, ಪ್ರಕರಣ ಕುರಿತು ತನಿಖೆಗೆ ಮುಂದಾಗಿದ್ದೇವೆ. ವಿಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದು ಮೀರತ್​ ಎಸ್ಪಿ ರಂವಿಜಯ್​ ಸಿಂಗ್​ ತಿಳಿಸಿದ್ದಾರೆ.

Comments are closed.