ರಾಷ್ಟ್ರೀಯ

ಗಂಡನೊಂದಿಗೆ ಗಲಾಟೆ; ನಾಲ್ವರು ಮಕ್ಕಳ ಕೈಕಾಲುಗಳನ್ನು ಕಟ್ಟಿ ಬೆಂಕಿ ಹಚ್ಚಿಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Pinterest LinkedIn Tumblr

ಬಾಂದಾ: ಗಂಡನೊಂದಿಗೆ ನಡೆದ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ನಾಲ್ವರು ಮಕ್ಕಳ ಕೈಕಾಲುಗಳನ್ನು ಕಟ್ಟಿ ತಾನು ಸೇರಿ ಬೆಂಕಿ ಹಚ್ಚಿಕೊಂಡಿರುವ ಘಟನೆ ನಡೆದಿದೆ.

ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಮೃತಪಟ್ಟು ಮತ್ತೊಂದು ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಮ್‌ಗಾವ್‌ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

28 ವರ್ಷದ ಪ್ರೇಮಾವತಿ ಮತ್ತು ಆಕೆಯ ಪತಿಯೊಂದಿಗೆ ಕಲಹ ಏರ್ಪಟ್ಟಿದೆ. ಈ ವೇಳೆ ಸಪ್ನ(7), ಪ್ರಶಾಂತ್‌ (5), ಸ್ನೇಹಾ(3) ಮತ್ತು ದಿವ್ಯಾನ್ಶ್‌(1) ಮಕ್ಕಳ ಕೈಕಾಲುಗಳನ್ನು ಕಟ್ಟಿಹಾಕಿದ್ದಾರೆ. ನಂತರ ಸೀಮೆಎಣ್ಣೆ ಯನ್ನು ತಾನು ಸುರಿದು ಅವರಿಗೆ ಬೆಂಕಿ ಹಚ್ಚಿದ್ದಾರೆ. ನಂತರ ತಾನು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ದಿವ್ಯಾನ್ಶ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸಪ್ನಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರೇಮಾವತಿ, ಪ್ರಶಾಂತ್‌ ಮತ್ತು ಸ್ನೇಹಾರನ್ನು ಝಾನ್ಸಿ ಮೆಡಿಕಲ್‌ ಕಾಲೇಜಿಗೆ ದಾಖಲಿಸಲಾಯಿತಾದರೂ ಪ್ರೇಮಾವತಿ ಮತ್ತು ಸ್ನೇಹ ಮೃತಪಟ್ಟಿದ್ದಾರೆ. ಸದ್ಯಕ್ಕೆ ಪ್ರಶಾಂತ್‌ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.