ರಾಷ್ಟ್ರೀಯ

ಬಿಹಾರದಲ್ಲಿ ನಡೆದ ಎನ್ ಕೌಂಟರ್’ವೊಂದರಲ್ಲಿ ಪೊಲೀಸ್ ಅಧಿಕಾರಿಯೇ ಬಲಿ!

Pinterest LinkedIn Tumblr

ಪಾಟ್ನಾ: ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳು ನಡೆಸುವ ಎನ್ ಕೌಂಟರ್ ಗಳಲ್ಲಿ ಸಮಾಜಘಾತುಕ ವ್ಯಕ್ತಿಗಳು ಬಲಿಯಾಗುವ ಸುದ್ದಿ ಕೇಳಿರುತ್ತೇವೆ. ಆದರೆ ಎನ್ ಕೌಂಟರ್ ಗೆ ಪೊಲೀಸ್ ಅಧಿಕಾರಿಯೇ ಬಲಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಅ.13 ರಂದು ಖಗಾರಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, “ಪಸ್ರ್ಹಾ ಸ್ಟೇಷನ್ ಹೌಸ್ ಅಧಿಕಾರಿ ಆಶೀಶ್ ಕುಮಾರ್ ಸಿಂಗ್ ಕ್ರಿಮಿನಲ್ ಗಳ ವಿರುದ್ಧದ ಹೋರಾಟದಲ್ಲಿ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ ಎಂದು ಖಗಾರಿಯಾ ಎಸ್ ಪಿ ಮಿನು ಕುಮಾರಿ ಹೇಳಿದ್ದಾರೆ.

ಬಿಹಾರ ಪೊಲೀಸ್ ಅಸೋಸಿಯೇಷನ್ ಅಧ್ಯಕ್ಷ ಮೃತ್ಯುಂಜಯ್ ಕುಮಾರ್ ಮೃತ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Comments are closed.