ರಾಷ್ಟ್ರೀಯ

ಸಚಿವ ಎಂ.ಜೆ ಅಕ್ಬರ್ ಮೇಲಿನ ಲೈಂಗಿಕ ಆರೋಪ ಕುರಿತು ಮೋದಿ ಮಾತನಾಡಲಿ: ಸುಬ್ರಮಣ್ಯಂ ಸ್ವಾಮಿ

Pinterest LinkedIn Tumblr


ನವದೆಹಲಿ: ಮೀಟೂ ಚಳುವಳಿಯ ಭಾಗವಾಗಿ ಎಂ.ಜೆ. ಅಕ್ಬರ್ ವಿರುದ್ಧ ಬಂದಿರುವ ಆರೋಪಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕೆಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಶುಕ್ರವಾರ ಹೇಳಿದ್ದಾರೆ.

ಅಕ್ಬರ್ ವಿರುದ್ಧ ಕೇವಲ ಒಬ್ಬ ಮಹಿಳೆಯಲ್ಲ ಹಲವಾರು ಮಹಿಳೆಯರು ಅವರ ಮೇಲೆ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹೇಳಿದರು ” ಅವರ ಮೇಲೆ ಕೇವಲ ಒಬ್ಬ ಆರೋಪಿಯಲ್ಲ ಹಲವಾರು ಮಹಿಳೆಯರು ಅವರ ವಿರುದ್ಧವಾಗಿ ಆರೋಪ ಮಾಡಿದ್ದಾರೆ. ನಾನು ಈಗಾಗಲೇ ಮೀಟೂ ಚಳುವಳಿಯನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ್ದೇನೆ. ಮಹಿಳೆಯರು ಬಹಳ ಸಮಯದ ನಂತರ ಇಂತಹ ಘಟನೆಗಳ ಕುರಿತು ಮುಕ್ತವಾಗಿ ಹೇಳಿಕೊಂಡರೆ ಅದು ತಪ್ಪು ಎಂದು ನಾನು ಭಾವಿಸುವುದಿಲ್ಲ ಆದ್ದರಿಂದ ಪ್ರಧಾನಿ ಈ ವಿಷಯದ ಕುರಿತಾಗಿ ಮಾತನಾಡಬೇಕು” ಎಂದು ಸ್ವಾಮಿ ತಿಳಿಸಿದರು.

ಪ್ರತಿಪಕ್ಷಗಳು ಈಗಾಗಲೇ ಅಕ್ಬರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ ಈಗ ಸುಬ್ರಮಣ್ಯ ಸ್ವಾಮಿ ಅವರ ಹೇಳಿಕೆ ಬಂದಿದೆ.ಆದರೆ ಇತ್ತೀಚಿಗೆ ತಮ್ಮ ಖಾತೆಯ ಸಚಿವರಾದ ಸುಷ್ಮಾ ಸ್ವರಾಜ್ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರಿಕೊಂಡಿದ್ದರು.ಇಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಮೀಟೂ ಚಳುವಳಿಯ ಭಾಗವಾಗಿ ಬಂದಂತಹ ಪ್ರಕರಣಗಳನ್ನು ನಿಭಾಯಿಸಲು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ನಾಲ್ವರು ಸದಸ್ಯರ ನ್ಯಾಯಾಂಗ ಸಮಿತಿಯನ್ನು ಪ್ರಸ್ತಾಪಿಸಿದ್ದಾರೆ.

Comments are closed.