ರಾಷ್ಟ್ರೀಯ

2014ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕಾಗಿ ಸುಳ್ಳು ಭರವಸೆಗಳನ್ನು ನೀಡಿದ್ದೆವು: ಸಚಿವ ನಿತಿನ್ ಗಡ್ಕರಿ

Pinterest LinkedIn Tumblr

ನವದೆಹಲಿ : ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದಿನ ಸತ್ಯವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಚ್ಚಿಟ್ಟಿದ್ದಾರೆ.

ಬಿಜೆಪಿ 2014ರ ಚುನಾವಣೆಯಲ್ಲಿ ಗೆಲುವು ಪಡೆದುಕೊಳ್ಳಲು ಹೆಚ್ಚಿನ ಸುಳ್ಳು ಭರವಸೆಗಳನ್ನು ನೀಡಿದ್ದು, ಇದೀಗ ಅಧಿಕಾರದಲ್ಲಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವ ಯಾವುದೇ ಭರವಸೆಗಳೂ ಕೂಡ ಇರಲಿಲ್ಲ. ಆದ್ದರಿಂದ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಇದೀಗ ಜನರು ಆ ಭರವಸೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ಎಂದರು.

ನಾನಾ ಪಾಟೇಕರ್ ಅವರ ರಿಯಾಲಿಟಿ ಶೋ ಒಂದರಲ್ಲಿ ಅವರು ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಮರಾಠಿ ರಿಯಾಲಿಟಿ ಶೋ ನಲ್ಲಿ ಈ ವಿಚಾರವನ್ನು ಗಡ್ಕರಿ ಹೇಳಿದ್ದಾರೆ.

ಗಡ್ಕರಿ ಅವರ ಈ ಹೇಳಿಕೆ ಇದೀಗ ಸಾಕಷ್ಟು ವೈರಲ್ ಆಗಿದ್ದು ಕಾಂಗ್ರೆಸ್ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಇದನ್ನು ಶೇರ್ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಸುಳ್ಳು ಭರವಸೆಗಳನ್ನು ನೀಡಿದೆ ಎನ್ನುವುದನ್ನು ಸಚಿವರೇ ಬಹಿರಂಗ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ. ಅಲ್ಲದೇ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಟ್ವಿಟರ್ ಮೂಲಕ ಟಾಂಗ್ ನೀಡಿದ್ದಾರೆ.

Comments are closed.