ರಾಷ್ಟ್ರೀಯ

ಕಲ್ಲಿನ ಉಲ್ಕೆಯ ತುಣುಕುಗಳಿಗೆ 70 ಲಕ್ಷ

Pinterest LinkedIn Tumblr


ನವದೆಹಲಿ: ಇತ್ತೀಚೆಗೆ ವಿಶ್ವಾದ್ಯಂತ ಉಲ್ಕೆಯ ತುಣುಕುಗಳಿಗೆ ಭಾರೀ ಬೇಡಿಕೆ ಶುರುವಾಗಿದೆ. ಹೀಗಾಗಿಯೇ ದೇಶ-ವಿದೇಶದ ಪ್ರತಿಷ್ಠಿತ ಸಂಸ್ಥೆಗಳು ಉಲ್ಕೆಯ ತುಣುಕುಗಳನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿವೆ. ಇದೀಗ ಅಮೆರಿಕಾದ ಮಿಚಿಗನ್​​ ವಿಶ್ವಾವಿದ್ಯಾಲಯವೂ ಉಲ್ಕೆಯ ತುಣುಕುಗಳನ್ನು ಸಂಗ್ರಹಿಸಲು ಮುಂದಾಗಿದೆ.

ಮಿಚಿಗನ್​​ನಲ್ಲಿ ಅನಾಮಧೇಯ ವ್ಯಕ್ತಿಯೋರ್ವನ ಬಳಿ ಮೂವತ್ತು ವರ್ಷದ ಹಿಂದಿನ ಉಲ್ಕಾಶಿಲೆಯ ತುಣುಕು ಇದೆ ಎನ್ನಲಾಗಿದೆ. ಸುಮಾರು 10 ಟನ್ ತೂಕದ ಉಲ್ಕಾಶಿಲೆಯ ತುಣುಕು ಬೆಲೆ ಇದೀಗ ಬರೋಬ್ಬರಿ 74 ಲಕ್ಷ ರೂಪಾಯಿಗಳು. ಮಿಚಿಗನ್​​ ವಿಶ್ವಾವಿದ್ಯಾಲಯದ ಸಂಶೋಧನ ವಿಭಾಗಕ್ಕೆ ಈ ತುಣುಕು ಬೇಕಾಗಿರುವ ಕಾರಣಕ್ಕೆ ಕೊಂಡುಕೊಳ್ಳಲು ಮುಂದಾಗಿದೆ.

ಈತ 1988 ರಲ್ಲಿ ಮಿಚಿಗನ್​​ನಲ್ಲಿ ಮನೆಯೊಂದನ್ನು ಖರೀದಿಸಿದ್ದ. ಈ ವೇಳೆ ಅಂದಿನ ಮನೆಯ ಮಾಲಿಕ 10 ಟನ್ ತೂಕದ ಉಲ್ಕಾಶಿಲೆಯ ತುಣುಕು ಸಮೇತ ಮನೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ಉಲ್ಕಾಶಿಲೆಯ ತುಣುಕು 1930ರಲ್ಲಿ ಆಕಾಂಶದಿಂದ ಧರೆಗೆ ಅಪ್ಪಳಿಸಿದ್ದ ಅಪರೂಪದ ಕಲ್ಲು ಎನ್ನುತ್ತಿವೆ ಸಂಶೋಧನ ಮೂಲಗಳು.

ಉಲ್ಕಾಶಿಲೆ ತುಣುಕನ್ನು ಕೊಳ್ಳಲು ಮುಂದಾಗಿರುವ ವಿಶ್ವಾವಿದ್ಯಾಯವೂ ಈಗಾಗಲೇ ಅನಾಮಧೇಯ ವ್ಯಕ್ತಿಯನ್ನ ಸಂಪರ್ಕಿಸಿದೆ. ನಿಮ್ಮ ಬಳಿ ಇರುವ 10 ಟನ್ ತೂಕದ ಉಲ್ಕಾಶಿಲೆ ತುಣುಕು ಬೆಲೆ 1 ಲಕ್ಷ ಡಾಲರ್​ಗಳು. ಈ ಕಲ್ಲು ನಮ್ಮ ಸಂಶೋಧನ ವಿಭಾಗ ಘಟಕಕ್ಕೆ ಅವಶ್ಯಕವಾಗಿದೆ. ಹೀಗಾಗಿ ಈ ಉಲ್ಕಾಶಿಲೆ ತುಣುಕನ್ನು ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಅಧಿಕೃತವಾಗಿ ಇನ್ನು ಮಾರಾಟವಾಗಿಲ್ಲ.

ಇನ್ನು ಮಿಚಿಗನ್​​ ವಿಶ್ವವಿದ್ಯಾಲಯ ಇತ್ತೀಚೆಗೆ ಉಲ್ಕೆಯ ಪೈಕಿ ಸಣ್ಣ ತುಂಡು ಸಿಕ್ಕಿದರೂ ಸಾಕು ಎಂದು ಅಪರೂಪದ ವಸ್ತುಗಳಂತೇ ಸಂಗ್ರಹಿಸುತ್ತಿದೆ. ಈಗಾಗಲೇ ಅಂತರ್ಜಾಲದಲ್ಲಿ ಇಂತಹ ತುಣುಕುಗಳಿಗಾಗಿ ಭಾರೀ ಬೇಡಿಕೆ ಇಟ್ಟಿದೆ. ಚಿಕ್ಕ ತುಂಡಿಗೂ 8.3 ಲಕ್ಷ ರೂಪಾಯಿ ನೀಡುವ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಅಮೆರಿಕದ ಗ್ರೀನ್‌ಲ್ಯಾಂಡ್‌ನಲ್ಲಿರುವ ವಾಯುನೆಲೆ ಬಳಿ ಭಾರೀ ಗಾತ್ರದ ಉಲ್ಕೆಯೊಂದು ಬಿದ್ದಿದೆ ಎಂದು ಶಂಕಿಸಲಾಗಿತ್ತು. ಈ ಬಗ್ಗೆ ಅನುಮಾನ ಬಂದರೂ ಅಮೆರಿಕದ ವಾಯುಸೇನೆ ಚಕಾರ ಎತ್ತದೇ ಹುಡುಕಾಟ ಆರಂಭಿಸಿತ್ತು. ಬಳಿಕ ವಿಜ್ಞಾನಿಗಳಿಂದಲೇ 2.1 ಟನ್ ತೂಕದ ಭಾರೀ ಗಾತ್ರದ ಉಲ್ಕೆ ಠ್ಹುಲೆ ವಾಯುನೆಲೆ ಸಮೀಪ ಸ್ಫೋಟವಾಗಿದೆ ಎಂದು ಖಚಿತವಾಯ್ತು.

ವಾಯುನೆಲೆ ಸಮೀಪ ಉಲ್ಕೆ ಸ್ಫೋಟಿಸುತ್ತಿರುವ ದೃಶ್ಯ ನಾಸಾ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ನಿಜ ಎಂದು ಅಮೆರಿಕನ್ ವಿಜ್ಞಾನಿಗಳ ಒಕ್ಕೂಟದ ಪರಮಾಣು ಮಾಹಿತಿ ಯೋಜನೆ ನಿರ್ದೇಶಕ ಹನ್ಸ್ ಕ್ರಿಸ್ಟೆನ್ಸನ್ ಕೂಡ ಟ್ವೀಟ್ ಮಾಡಿದ್ದರು. ಆದರೆ, ಭದ್ರತಾ ದೃಷ್ಟಿಯಿಂದ ಅಮೆರಿಕ ವಾಯುಪಡೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿತ್ತು.

Comments are closed.