ರಾಷ್ಟ್ರೀಯ

ಛತ್ತೀಸ್ ಗಡದ ದುರ್ಗ್ ಜಿಲ್ಲೆಯ ಬಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ ಗ್ಯಾಸ್ ಪೈಪ್ ಲೈನ್ ಸ್ಪೋಟ: 9 ಸಾವು; 14 ಮಂದಿಗೆ ಗಾಯ

Pinterest LinkedIn Tumblr

ರಾಯ್ ಪುರ: ಛತ್ತೀಸ್ ಗಡದ ದುರ್ಗ್ ಜಿಲ್ಲೆಯ ಬಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ 9 ಮಂದಿ ಸಾವನ್ನಪ್ಪಿ 14 ಜನ ಗಾಯಗೊಂಡಿದ್ದಾರೆ.

ಬೆಳಗ್ಗೆ 11 ಗಂಟೆ ವೇಳೆಗೆ ಬಿಲಾಯ್ ಕಾರ್ಖಾನೆಯ ವೇಳೆಗೆ ಗ್ಯಾಸ್ ಪೈಪ್ ಲೈನ್ ಮತ್ತು ಕೋಕ್ ಓವೆನ್ ಯದಲ್ಲಿ ಸ್ಪೋಟವಾಗಿದೆ, ಎಂದು ದುರ್ಗ್ ವಲಯದ ಐಜಿಪಿ ಜಿಪಿ ಸಿಂಗ್ ತಿಳಿಸಿದ್ದಾರೆ.

ಸ್ಪೋಟದಲ್ಲಿ ಕನಿಷ್ಠ ಪಕ್ಷ ಆರು ಮಂದಿ ಸುಟ್ಟು ಸಾವನ್ನಪ್ಪಿದ್ದಾರೆ,. ಇನ್ನೂ 14 ಮಂದಿ ಗಾಯಗೊಂಡಿದ್ದು, ಅದರಲ್ಲಿ ಹಲವರ ಸ್ಥಿತಿ ಗಂಬೀರವಾಗಿದೆ ಎಂದು ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಸ್ಥಳದಲ್ಲಿ 24 ಮಂದಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ, ಸ್ಥಳಕ್ಕೆ ಪೊಲೀಸ ಅಧಿಕಾರಿಗಳು, ರಕ್ಷಣಾ ತಂಡ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ, ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಧುನಿಕ ಹಾಗೂ ವಿಸ್ತೃತ ಬಿಲಾಯ್ ಉಕ್ಕು ಕಾರ್ಕಾನೆಯನ್ನು ಲೋಕಾರ್ಪಣೆ ಮಾಡಿದ್ದರು.

Comments are closed.