ರಾಷ್ಟ್ರೀಯ

ಜಯಲಲಿತಾ ದಾಖಲಿಸಿದ್ದ ಅಪೋಲೋ ಆಸ್ಪತ್ರೆಯಲ್ಲಿ ಸಿಸಿಟಿವಿ ಸ್ವಿಚ್ ಆಫ್ ಮಾಡಿದ್ದೇಕೆ ಗೊತ್ತಾ?

Pinterest LinkedIn Tumblr


ನವದೆಹಲಿ: ಜಯಲಲಿತಾ ಆಸ್ಪತ್ರೆಗೆ ದಾಖಲಾಗಿ ಅವರ ಮರಣದ ನಂತರವೂ ಸಹಿತ ಒಂದಿಲ್ಲೊಂದು ಥಿಯರಿಗಳು ಈಗ ಅವರ ಸಾವಿನ ಹಿಂದೆ ಸುತ್ತುತ್ತಲೇ ಇವೆ.ಈಗ ಅಂತಹದ್ದೇ ಮಾದರಿಯಲ್ಲಿ ಈಗ ಮತ್ತೊಂದು ಟ್ವಿಸ್ಟ್ ದೊರತಿದೆ.ಹಾಗಾದರೆ ಏನಪ್ಪಾ ಅಂತೀರಾ ಈ ಟ್ವಿಸ್ಟ್. ಇಲ್ಲಿದೆ ನೋಡಿ ಫುಲ್ ರೀಪೋರ್ಟ್.

ಚೆನ್ನೈ ನಲ್ಲಿನ ಅಪೋಲೋ ಆಸ್ಪತ್ರೆ ಶನಿವಾರದಂದು ಐದು ಪುಟಗಳ ಅಫಿಡವಿಟ್ ಸಲ್ಲಿಸಿದ್ದು ಈ ಅಫಿಡವಿಟ್ ನಲ್ಲಿ ಗುಪ್ತಚರ ಇಲಾಖೆ ಪೋಲಿಸರೇ ಸಿಸಿಟಿವಿಯನ್ನು ಸ್ವಿಚ್ ಆಫ್ ಮಾಡಲು ಸೂಚಿಸಿದ್ದರು ಎನ್ನುವ ಅಚ್ಚರಿಯ ಮಾಹಿತಿಯೊಂದನ್ನು ಅದು ರಿಪೋರ್ಟ್ ನಲ್ಲಿ ತಿಳಿಸಿದೆ.

ಅಪೋಲೋ ಆಸ್ಪತ್ರೆ ಅರ್ಮುಘಸ್ವಾಮಿ ತನಿಖಾ ಸಂಸ್ಥೆಗೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಗುಪ್ತಚರ ಇಲಾಖೆ ಕೆ.ಎನ್ ಸತ್ಯಮೂರ್ತಿ ಅವರು ಜಯಲಲಿತಾರನ್ನು ರೂಮಿನಿಂದ ಹೊರಗಡೆ ಕರೆದೊಯ್ಯುವಾಗ ಸಿಸಿಟಿವಿಯನ್ನು ಸ್ವಿಚ್ ಆಫ್ ಮಾಡಿ ರೂಮಿಗೆ ಬಂದ ನಂತರ ಸ್ವಿಚ್ ಆನ್ ಮಾಡಲು ಆಸ್ಪತ್ರೆಗೆ ತಿಳಿಸಿದ್ದರು, ಈ ಇದರಿಂದ ಆಸ್ಪತ್ರೆ ಸಿಸಿಟಿವಿಯನ್ನು ಸ್ವಿಚ್ ಆಫ್ ಮಾಡಿತ್ತು ಎಂದು ತನಿಖಾ ಸಂಸ್ಥೆಗೆ ತಿಳಿಸಿದೆ.

2016ರಲ್ಲಿ ಜಯಲಲಿತಾ ಅಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಬಹುತೇಕ ಸಿಸಿಟಿವಿ ದೃಶ್ಯಾವಳಿಗಳು ಇಲ್ಲದೆ ಇರುವುದರಿಂದ ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಜಯಲಲಿತಾ ಅವರು ಅನಾರೋಗ್ಯದ ನಿಮಿತ್ತ ಸೆಪ್ಟೆಂಬರ್ 22 ರಿಂದ 75 ದಿನಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾದ ನಂತರ 2016 ರ ಡಿಸೆಂಬರ್ 5 ರಂದು ನಿಧನ ಹೊಂದಿದರು. ಸೆಪ್ಟೆಂಬರ್ 2017 ರಲ್ಲಿ, ರಾಜ್ಯ ಸರ್ಕಾರವು ಅವರ ಸಾವಿನ ವಿಚಾರವಾಗಿ ತನಿಖಾ ಸಮಿತಿಯನ್ನು ರಚಿಸಿತು, ಇದು ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಲು ಕಾರಣವಾದ ಅಂಶಗಳಿಂದ ಹಿಡಿದು ಅವರು ತೆಗೆದುಕೊಂಡ ಎಲ್ಲ ಚಿಕಿತ್ಸೆಗಳನ್ನು ತನಿಖೆ ಮಾಡಲು ಆದೇಶಿಸಿತ್ತು.

Comments are closed.