ರಾಷ್ಟ್ರೀಯ

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ನಿವೃತ್ತ ನ್ಯಾಯಾಧೀಶ ದಂಪತಿ

Pinterest LinkedIn Tumblr


ತಿರುಪತಿ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆಂಧ್ರಪ್ರದೇಶದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಅವರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಿರುಪತಿ ಮೂಲದ ನಿವೃತ್ತ ನಾಯಾಧೀಶ ಪಿ.ಸುಧಾಕರ್ (65) ಹಾಗೂ ಅವರ ಪತ್ನಿ ಪಿ ವರಲಕ್ಷ್ಮೀ (56) ಆತ್ಮಹತ್ಯೆಗೆ ಶರಣಾದ ದಂಪತಿಯಾಗಿದ್ದು, ತಿರುಪತಿ-ರೆನಿಗುಂಟಾ ಮಾರ್ಗದ ರೈಲ್ವೆ ಹಳಿ ಮೇಲೆ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.

ಅನ್ಯಾರೋಗ್ಯದ ಹಿನ್ನೆಲೆಯಲ್ಲಿ ಪಿ.ಸುಧಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪತಿ ಸಾವಿಗೆ ಶರಣಾದ ಕೆಲವೇ ಕ್ಷಣಗಳಲ್ಲಿ ಪತ್ನಿ ವರಲಕ್ಷ್ಮೀ ಕೂಡ ಅದೇ ಮಾರ್ಗದಲ್ಲಿ ಬೇರೊಂದು ರೈಲಿಗೆ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.