ರಾಷ್ಟ್ರೀಯ

ಹಳಿಯೇ ಇಲ್ಲದೇ ರೈಲು ಚಾಲನೆ ಮಾಡುವ ಪ್ರಯೋಗ ಯಶಸ್ವಿ

Pinterest LinkedIn Tumblr


ನವದೆಹಲಿ: ಕಂಬಿ ಇಲ್ಲದೇ ರೈಲು ಬಿಡೋದು ಅನ್ನೋದು ಇಷ್ಟು ದಿನ ತಮಾಷೆಯ ವಿಷಯವಾಗಿದ್ದು, ಅಫ್ಕೋರ್ಸ್ ಭಾರತದ ಮಟ್ಟಿಗೆ ಅಷ್ಟೇ. ಯುಕೆ, ಅಮೆರಿಕಾಗಳಲ್ಲಿ ಈ ಪರಿಕಲ್ಪನೆ 60 ರ ದಶಕದಲ್ಲೇ ಜಾರಿಯಲ್ಲಿತ್ತು. ಈಗ ಭಾರತದಲ್ಲೂ ಸಹ ಹಳಿಯೇ ಇಲ್ಲದೇ ರೈಲು ಚಾಲನೆ ಮಾಡುವ ಪ್ರಯೋಗ ಯಶಸ್ವಿಯಾಗಿದೆ. ಅಂದಹಾಗೆ ಇದಕ್ಕೆ ರೋಡ್ ರೈಲರ್ ರೈಲುಗಳೆನ್ನುತ್ತಾರೆ.
ಸರಕು ಕಾರಿಡಾರ್ ಪ್ರಾರಂಭವಾಗುತ್ತಿದ್ದಂತೆಯೇ ಈ ರೀತಿಯ ರೋಡ್ ರೈಲರ್ ರೈಲುಗಳು ಹೆಚ್ಚಾಗುತ್ತದೆ ಎಂದು ದೈನಿಕ್ ಜಾಗರಣ್ ವರದಿ ಪ್ರಕಟಿಸಿದೆ. ದೇಶದ ಮೊದಲ ರೋಡ್ ರೈಲರ್ ಟ್ರೈನು ತಮಿಳುನಾಡಿನಿಂದ ಹರ್ಯಾಣ (ಪಲ್ವಾಯಿ) ಗೆ ತೆರಳಿದೆ. ರೋಡ್ಡ್ ರೈಲರ್ ಗಳಲ್ಲಿನ ಬೋಗಿಗಳನ್ನು ಹಳಿಯ ಮೇಲೆ ಹಾಗೂ ನೆಲದ ಮೇಲೆ ಎರಡೂ ರೀತಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಚಲಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು 8 ಟ್ರಕ್ ಚಕ್ರಗಳು ಹಾಗೂ 4 ರೈಲು ಚಕ್ರಗಳನ್ನು ಹೊಂದಿದೆ. ಸರಕು ಸಾಗಣೆಯ ವಿಷಯದಲ್ಲಿ ರೋಡ್ ರೈಲರ್ ಗಳಿಂದಾಗಿ ಸಮಯ ಮತ್ತು ಹಣವನ್ನು ಹೆಚ್ಚು ಉಳಿತಾಯ ಮಾದಬಹುದಾಗಿದೆ.

Comments are closed.