ರಾಷ್ಟ್ರೀಯ

121 ರೂ.ನಿಂದ LICಯ ಈ ಪಾಲಿಸಿ ಪ್ರಾರಂಭಿಸಿ, 27 ಲಕ್ಷ ರೂ. ಪಡೆಯಿರಿ

Pinterest LinkedIn Tumblr


ಜೀವ ವಿಮಾ ನಿಗಮ (LIC) ಹೆಣ್ಣುಮಕ್ಕಳ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ‘ಕನ್ಯಾಧಾನ್ ಯೋಜನೆ’ ಎಂಬ ಹೊಸ ಪಾಲಿಸಿಯನ್ನು ಪರಿಚಯಿಸಿದೆ. ಈ ಹೊಸ ಯೋಜನೆಯಲ್ಲಿ ಪ್ರತಿದಿನ 121 ರೂ. ಹಿಡಿದು ಮಾಸಿಕ ಪ್ರೀಮಿಯಂ 3600ರೂ.ವರೆಗೆ ಪಾವತಿಸುವ ಪ್ಲಾನ್​​ಗಳನ್ನು ನೀಡಲಾಗಿದೆ. ಹಾಗೆಯೇ ಪ್ರೀಮಿಯಂ ಪಾವತಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬಹುದಾದ ಅವಕಾಶಗಳನ್ನು ಒದಗಿಸಲಾಗಿದೆ.

ಎಲ್​ಐಸಿಯ ಈ ವಿಶೇಷ ವಿಮಾ ಯೋಜನೆಯಲ್ಲಿ ನೀವು ದಿನವೊಂದಕ್ಕೆ 121ರೂ. ಪಾವತಿಸಿದರೆ, 25 ವರ್ಷಗಳ ಬಳಿಕ 27 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಇದರೊಳಗೆ ಪಾಲಿಸಿದಾರನು ಮರಣ ಹೊಂದಿದರೆ ಹಣ ಪಾವತಿಸುವುದನ್ನು ಮುಂದುವರಿಸಬೇಕಿಲ್ಲ. ಬದಲಾಗಿ ಎಲ್​ಐಸಿಯಿಂದ ಪ್ರತಿವರ್ಷ 1 ಲಕ್ಷ ರೂ. ವಿಮಾ ಮೊತ್ತ ಲಭಿಸುತ್ತದೆ. ಹಾಗೆಯೇ 25 ವರ್ಷಗಳ ಬಳಿಕ ಪಾಲಿಸಿಯ ನಾಮಿನಿಗೆ 27 ಲಕ್ಷ ರೂ. ಪ್ರತ್ಯೇಕ ವಿಮೆ ಕೂಡ ದೊರೆಯುತ್ತದೆ.

ಪಾಲಿಸಿಯ ನಿಯಮಗಳೇನು?

ಕನ್ಯಾಧಾನ್ ಪಾಲಿಸಿಯನ್ನು ಪ್ರಾರಂಭಿಸುವ ವ್ಯಕ್ತಿಯು 30 ವರ್ಷವನ್ನು ತುಂಬಿರಬೇಕು. ಯಾರ ಹೆಸರಲ್ಲಿ ಪಾಲಿಸಿ ಪ್ರಾರಂಭಿಸಲಾಗುತ್ತದೆಯೋ ಆ ಹೆಣ್ಣು ಮಗುವಿಗೆ 1 ವರ್ಷವಾಗಿರಬೇಕು. 25 ವರ್ಷದ ಈ ಪ್ಲಾನ್​ನಲ್ಲಿ 22 ವರ್ಷದವರೆಗೆ ಪ್ರಿಮಿಯಂ ಅನ್ನು ಕಟ್ಟಬೇಕಾಗುತ್ತದೆ. ಪಾಲಿಸಿ ಪ್ರಾರಂಭಿಸಲಾಗುವ ಮಗುವಿನ ವಯಸ್ಸಿಗೆ ತಕ್ಕಂತೆ ಪಾಲಿಸಿ ನಿಯಮ ಕೂಡ ಬದಲಾಗುತ್ತದೆ. ಅದೇ ರೀತಿ ಪ್ರೀಮಿಯಂ ಮತ್ತು ಸಮಯದ ಮಿತಿಯಲ್ಲಿ ಬದಲಾವಣೆ ಇರುತ್ತದೆ.

ಕನ್ಯಾಧಾನ್ ಯೋಜನೆಯ ಕಿರುನೋಟ

ಕನ್ಯಧಾನ್ ಪಾಲಿಸಿ ಸಮಯ 25 ವರ್ಷ.

22 ವರ್ಷಗಳವರೆಗೆ ಪ್ರೀಮಿಯಂ ಕಟ್ಟಬೇಕಾಗುತ್ತದೆ.

ಪ್ರತಿದಿನ 121 ರೂ. ಅಥವಾ ತಿಂಗಳಿಗೆ 3600 ರೂ. ಭರಿಸುವ ಅವಕಾಶವಿದೆ.

ಪಾಲಿಸಿದಾರರು ಮೃತಪಟ್ಟರೆ ಕುಟುಂಬ ವರ್ಗದವರು ಪ್ರೀಮಿಯಂ ಪಾವತಿಸಬೇಕಿಲ್ಲ.

ಪಾಲಿಸಿ ಪಡೆದ ವ್ಯಕ್ತಿ ಮರಣ ಹೊಂದಿದರೆ ಪ್ರತಿ ವರ್ಷ 1 ಲಕ್ಷ ರೂ. ನೀಡಲಾಗುತ್ತದೆ.

ಪಾಲಿಸಿ ಸಮಯ ಪೂರ್ಣಗೊಂಡ ಬಳಿಕ ಪಾಲಿಸಿ ನಾಮಿನಿಗೆ 27 ಲಕ್ಷ ರೂ. ಸಿಗುತ್ತದೆ.

ಕನ್ಯಾಧಾನ್ ಯೋಜನೆಯ ನೀತಿಯನ್ನು ಬದಲಿಸಲು ಹಾಗೂ ಕಡಿಮೆ ಪ್ರೀಮಿಯಂನಲ್ಲಿ ಪಾಲಿಸಿಯನ್ನು ಪಡೆಯಬಹುದು.

ಸಿಂಗಲ್ ಎಂಡೋವ್ಮೆಂಟ್ ಪ್ಲಾನ್
LIC ಇದೇ ರೀತಿ ಮತ್ತೊಂದು ಪಾಲಿಸಿಯನ್ನು ಜಾರಿ ಮಾಡಿದೆ. ಈ ಯೋಜನೆಯಲ್ಲಿ ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. 90 ದಿನಗಳ ಮಗುವಿನಿಂದ 65 ವರ್ಷದ ಮುದುಕವರೆಗೂ ಈ ಪಾಲಿಸಿಯನ್ನು ಪ್ರಾರಂಭಿಸಹುದು. ಈ ಪಾಲಿಸಿಯಲ್ಲಿ ಕನಿಷ್ಠ 50 ಸಾವಿರ ರೂ. ವಿಮೆಯನ್ನು ಮಾಡಿಕೊಳ್ಳಬೇಕು. ಅಲ್ಲದೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅದಕ್ಕಿಂತ ಹೆಚ್ಚಿನ ವಿಮೆಯನ್ನೂ ಮಾಡಬಹುದಾದ ಅವಕಾಶವಿದೆ. 50 ಸಾವಿರ ವಿಮಾ ಯೋಜನೆ ಪ್ರಾರಂಭಿಸಿದ ವ್ಯಕ್ತಿಯು 40 ಸಾವಿರ ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಹತ್ತು ವರ್ಷಗಳ ಈ ಪಾಲಿಸಿಯನ್ನು ಪೂರ್ಣಗೊಳಿಸಿದರೆ 75 ರಿಂದ 80 ಸಾವಿರ ರೂ.ಗಳನ್ನು ಪಾಲಿಸಿದಾರನು ಪಡೆಯಬಹುದು. ಹಾಗೆಯೇ ವಿಮೆ ಮಾಡಿಸಿಕೊಂಡ ವ್ಯಕ್ತಿ ಮರಣ ಹೊಂದಿದರೆ ನಾಮಿನಿಗೆ 50 ಸಾವಿರ ರೂ.ಗಳನ್ನು ನೀಡಲಾಗುತ್ತದೆ.

Comments are closed.