ರಾಷ್ಟ್ರೀಯ

ಬಾಲಕಿಯ ಕಣ್ಮುಂದೆಯೇ ತಂದೆಯನ್ನು ಗುಂಡಿಟ್ಟು ಹತ್ಯೆ !

Pinterest LinkedIn Tumblr

ನವದೆಹಲಿ: ತೈಮೂರ್ ನಗರದಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊರ್ವನನ್ನು ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದುಷ್ಕರ್ಮಿಗಳಿಂದ ಹತ್ಯೆಯಾದ ವ್ಯಕ್ತಿಯನ್ನು ರೂಪೇಶ್ ಕುಮಾರ್ ಬಸೊಯಾ ಎಂದು ಗುರುತಿಸಲಾಗಿದೆ. ಮುಸುಕುಧಾರಿಗಳಿಬ್ಬರು ಮನೆಯ ಹತ್ತಿರಬಂದು ರೂಪೇಶ್ ಎದೆಗೆ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಈ ಘಟನೆ ಕುರಿತಂತೆ ರೂಪೇಶ್ ಕುಮಾರ್ ಪುತ್ರಿ 12 ವರ್ಷದ ಸೆಹಜ್ ಕಣ್ಮುಂದೆಯೇ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿದರು. ಈ ದೃಶ್ಯವನ್ನು ಕಣ್ಣಾರೆ ಕಂಡು ಗಾಬರಿಗೊಂಡಿದ್ದ ಬಾಲಕಿ ಅಳುತ್ತಾ ಈ ಘನ ಘೋರ ದೃಶ್ಯದ ಬಗ್ಗೆ ಮಾತನಾಡಿದೆ.

ನಾನು ನನ್ನ ಅಣ್ಣ ಆದಿತ್ಯ ಮನೆಯ ಮುಂದೆ ಆಟವಾಡುತ್ತಿದ್ದೇವು. ನಮ್ಮ ತುಂಟಾಟವನ್ನು ತಂದೆ ನೋಡುತ್ತಾ ಖುಷಿ ಪಡುತ್ತಿದ್ದರು. ಈ ವೇಳೆ ಹಂತರಿಬ್ಬರು ಬಂದು ಕೆಟ್ಟದಾಗಿ ಬೈಯುತ್ತಿದ್ದರು. ಈ ವೇಳೆ ತಂದೆ ಬೈಯ್ಯಬೇಡ ಇಲ್ಲದಿದ್ದರೆ ನಿನ್ನನ್ನು ಶೂಟ್ ಮಾಡುತ್ತೀನಿ ಅಂದರು ಅಷ್ಟರಲ್ಲೇ ಅವರು ನನ್ನ ತಂದೆಯ ಎದೆಗೆ ಗುಂಡಿಟ್ಟು ಪರಾರಿಯಾದರು ಎಂದು ಹೇಳಿದೆ.

ಡಿಸೆಂಬರ್ ತಿಂಗಳಲ್ಲಿ ನನ್ನ ಹುಟ್ಟುಹಬ್ಬವಿದ್ದು ದೊಡ್ಡ ಗಿಫ್ಟ್ ಕೊಡುವುದಾಗಿ ತಂದೆ ಹೇಳಿದ್ದರು ಎಂದು ಬಾಲಕಿ ಅಳುತ್ತಾ ಹೇಳಿದೆ.

ರೂಪೇಶ್ ನಾಲ್ಕು ವರ್ಷಗಳ ಹಿಂದೆ ನಮ್ಮ ಪ್ರದೇಶದಲ್ಲಿ ಡ್ರಗ್ಸ್ ಮಾರಲು ಮುಂದಾಗಿದ್ದರು. ಇದನ್ನು ರೂಪೇಶ್ ತಡೆದಿದ್ದರು. ಅಲ್ಲದೆ ಅವರೊಂದಿಗೆ ಮಾರಾಮಾರಿ ನಡೆದಿತ್ತು. ಈ ಕೊಲೆಗೆ ಇದೇ ಕಾರಣವಿರಬಹುದು ಎಂದು ರೂಪೇಶ್ ಸಹೋದರ ಶಂಕೆ ವ್ಯಕ್ತಪಡಿಸಿದ್ದಾರೆ.

Comments are closed.