ರಾಷ್ಟ್ರೀಯ

LIC ಹೂಡಿಕೆದಾರರಿಗೆ 111 ಪಾಲಿಸಿಗಳು ಸ್ಥಗಿತ

Pinterest LinkedIn Tumblr


ಹೊಸದಿಲ್ಲಿ: ದೇಶದ ಅತಿ ದೊಡ್ಡ ವಿಮಾ ಕಂಪೆನಿ ಲೈಫ್​ ಇನ್ಶೂರೆನ್ಸ್​ ಕಾರ್ಪೋರೇಷನ್​ ಆಫ್​ ಇಂಡಿಯಾ(LIC) ತನ್ನ ಪ್ರಸಿದ್ಧ ಪಾಲಿಸಿಯಲ್ಲೊಂದಾದ ಜೀವನ್​ ಅಕ್ಷಯ್​ ಮಾರಾಟವನ್ನು 2017ರ ಡಿಸೆಂಬರ್​ 1 ರಿಂದ ಸ್ಥಗಿತಗೊಳಿಸಿದೆ. ಇದರೊಂದಿಗೆ ಇನ್ನೂ ಹಲವು ಪಾಲಿಸಿಗಳನ್ನು ಇದು ಬಂದ್​ ಮಾಡಿದೆ. ಕಂಪೆನಿಯು ಈ ಕುರಿತಾಗಿ ನೀಡಿರುವ ಹೇಳಿಕೆಯಲ್ಲಿ ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಈ ಪಾಲಿಸಿಯ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಲು ಕಷ್ಟವಾಗುತ್ತಿದೆ ಎಂದು ತಿಳಿಸಿದೆ. ಇದೇ ಕಾರಣದಿಂದ ಈ ಪಾಲಿಸಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

LIC ತನ್ನ ಜಾಲತಾಣದಲ್ಲಿ ಸ್ಥಗಿತಗೊಳಿಸಿರುವ ಪಾಲಿಸಿಯ ಮಾಹಿತಿಯನ್ನು ಹಂಚಿಕೊಂಡಿದೆ. ಹಾಗಾದರೆ ಯಾವೆಲ್ಲಾ ಪಾಲಿಸಿಗಳು ಸ್ಥಗಿತಗೊಂಡಿವೆ? ಈ ಪಾಲಿಸಿ ಮಾಡಿಸಿಕೊಂಡವರು ಮುಂದೇನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ. ಇದನ್ನು ತಿಳಿದುಕೊಂಡ ಬಳಿಕ ಯಾವುದೇ ಏಜೆಂಟ್​ಗಳು ನಿಮಗೆ ಸ್ಥಗಿತಗೊಂಡ ಪಾಲಿಸಿಯನ್ನು ನೀಡಲು ಸಾಧ್ಯವಿಲ್ಲ.

ಯಾವೆಲ್ಲಾ ಪಾಲಿಸಿಗಳು ಸ್ಥಗಿತಗೊಂಡಿವೆ?

LIC ತನ್ನ ವೆಬ್​ಸೈಟಿನಲ್ಲಿ ನೀಡಿರುವ ಮಾಹಿತಿ ಅನ್ವಯ ಇನ್ಮುಂದೆ ಯಾವುದೇ ಹೂಡಿಕೆದಾರ ಈ ಕೆಳಗೆ ನೀಡಿರುವ ಪಾಲಿಸಿಗಳಲ್ಲಿ ಇನ್ಮುಂದೆ ಹೂಡಿಕೆ ಮಾಡಲು ಸಾಧ್ಯವಿಲ್ಲ.
ಜೀವನ್​ ಸುಗಮ್​
ಜೀವನ್​ ವೈಭವ್
ಜೀವನ್​ ವೃದ್ಧಿ
ಫಾರ್ಚೂನ್​ ಪ್ಲಸ್ ಪ್ಲಾನ್​
ಮಾರ್ಕೆಟ್​ ಪ್ಲಸ್- I
ಪ್ರಾಫಿಟ್​ ಪ್ಲಸ್​
ಮನಿ ಪ್ಲಸ್​- I
ಚೈಲ್ಡ್​ ಫಾರ್ಚೂನ್​ ಪ್ಲಸ್​
ಜೀವನ್​ ಸಾಥೀ ಪ್ಲಸ್​
ಸಮೃದ್ಧಿ ಪ್ಲಸ್​
ಪೆಂನ್ಶನ್​ ಪ್ಲಸ್​
ಜೀವನ್​ ನಿಧಿ
ನವಜೀವನ್ ಧಾರಾ- I
ನಯೀ ಜೀವನ್ ಸುರಕ್ಷಾ- I
ಹೆಲ್ತ ಪ್ಲಸ್​ attached file is in PDF Document Format
ವೆಲ್ತ್​ ಪ್ಲಸ್​
ಸಮೂಹ್​ ಸೂಪರ್​ ಎಜುಕೇಷನ್​ ಪ್ಲಸ್​
ವಿಮಾ ಖಾತೆ- I
ವಿಮಾ ಖಾತೆ- 2
ಎಸ್​ಡಿಎ ಇಂಡೋವ್ಮೆಂಟ್​ ವೆಸ್ಟಿಂಗ್​21
ಸಿಡಿಎ ಇಂಡೋವ್ಮೆಂಟ್​ 18
ಜೀವನ್​ ಮಿತ್ರ್​(ದ್ವಿಗುಣ ಸುರಕ್ಷೆ)
ಧನ್​ ವಾಪಸೀ ಯೋಜನಾ-25 ವರ್ಷ
ಜೀವನ್ ಮಿತ್ರ್​(ತ್ರಿಗುಣ ಸುರಕ್ಷೆ)
ಜೀವನ್​ ಪ್ರಮುಖ್​
ಆಜೀವನ್​ ಪಾಲಿಸಿ
ಫ್ಲೋಟಿಂಗ್​ ಇನ್ಶೂರೆನ್ಸ್​ ಪಾಲಿಸಿ
ಜೀವನ್​ ಮಿತ್ಸ್​(ದ್ವಿಗುಣ ಸುರಕ್ಷೆ ಬಂದೋಬಸ್ಟ್​ ಪಾಲಿಸಿ)
ಜೀವನ್​ ಅಮೃತ್​
ಜೀವನ್​ ಸುರಭಿ-25 ವರ್ಷ
ಜೀವನ್​ ಸುರಭಿ-15 ವರ್ಷ
ಜೀವನ್​ ಅನುರಾಗ್
ಚೈಲ್ಡ್​ ಕರಿಯರ್​ ಯೋಜನಾ
ಜೀವನ್​ ಶ್ರೀ- I
ಜೀವನ್​ ಅಂಕುರ್​
ಬಂದೋಬಸ್ತಿ ವಿಮಾ ಯೋಜನೆ
ವೈವಾಹಿಕ ಬಂದೋಬಸ್ತ್​ ಅಥವಾ ಶೈಕ್ಷಣಿಕ
ಅನ್​ಮೋಲ್​ ಜೀವನ್- I
ವಾರ್ಷಿಕ ಯೋಜನೆ
ಜೀವನ್​ ಛಾಯಾ
ಕೋಮಲ್​ ಜೀವನ್​
ಜೀವನ್​ ಕಿಶೋರ್​
ಧನ್​ ವಾಪ್ಸಿ ಯೋಜನಾ-20 ವರ್ಷ
ಜೀವನ್​ ತರಂಗ
ಹೊಸ ವಿಮೆ ಗೋಲ್ಡ್​
ವಿಮಾ ಹೂಡಿಕೆ 2005
ಜೀವನ್​ ಸರಳ್​
ಜೀವನ್​ ಆನಂದ್
ವಿಮಾ ಉಳಿಕೆ
ಜೀವನ್​ ಆಧಾರ್​
ಜೀವನ್​ ವಿಶ್ವಾಸ್​
ಜೀವನ್​ ದಸೀಪ್
ಜೀವನ್ ಮಂಗಲ್​
ಜೀವನ್ ಮಧುರ್
ಇಂಡೋವ್ಮೆಂಟ್​ ಪ್ಲಸ್​
ಹೊಸ ಜೀವನ ನಿಧಿ
ಅಮೂಲ್ಯ ಜೀವನ- I
ಪ್ಲೆಕ್ಸಿ ಪ್ಲಸ್​
ಜೀವನ್​ ಸುರಭಿ 20 ವರ್ಷ
ಜೀವನ್​ ಭಾರತಿ- I
ಹೆಲ್ತ್​ ಪ್ರೊಟೆಕ್ಷನ್​ ಪ್ಲಸ್​
ಪರಿವರ್ತನಶೀಲ ಅವಧಿ ವಿಮಾ ಪಾಲಿಸಿ
ಜೀವನ್​ ಶಗುಣ್ ಯೋಜನೆ
ವಯಸ್ಕ ಪೆಂಶನ್​ ವಿಮಾ ಯೋಜನೆ

ಪಾಲಿಸಿ ಇದ್ದರೆ ಏನು ಮಾಡುವುದು?

ತಜ್ಞರು ಈ ಕುರಿತಾಗಿ ಮಾತನಾಡುತ್ತಾ ಪಾಲಿಸಿ ಸ್ಥಗಿತಗೊಳ್ಳುವುದಕ್ಕೂ ಮೊದಲು ಹೂಡಿಕೆ ಮಾಡಿದವರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಪಾಲಿಸಿ ಮೆಚ್ಯುರಿಟಿಗೆ ಬಂದಾಗ ಅವರಿಗೆ ಪಾಲಿಸಿಯಲ್ಲಿ ತಿಳಿಸಿರುವ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂದಿದ್ದರು. ಇದೇ ಸಂದರ್ಭದಲ್ಲಿ ಹೂಡಿಕೆದಾರರು ಭವಿಷ್ಯದಲ್ಲಿ ಈ ಪಾಲಿಸಿಗಳನ್ನು ಖರೀದಿಸದಂತೆ ಎಚ್ಚರವಹಿಸಬೇಕೆಂದೂ ತಿಳಿಸಿದ್ದಾರೆ.

ಸ್ಥಗಿತಗೊಳಿಸಲು ಕಾರಣವೇನು?

ತಜ್ಙರು ಹೇಳುವ ಅನ್ವಯ ಯಾವುದೇ ವಿಮಾ ಕಂಪೆನಿಯು ತಮ್ಮ ಆದಾಯ ಕಡಿಮೆಯಾದಾಗ ಪಾಲಿಸಿಯನ್ನು ಸ್ಥಗಿತಗೊಳಿಸುತ್ತದೆ. ಕಳೆದ ವರ್ಷ LIC ಯು ಜೀವನ್​ ಅಕ್ಷಯ್​ ಪಾಲಿಸಿಯನ್ನು ಸ್ಥಗಿತಗೊಳಿವ ವೇಳೆ ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಲು ಕಷ್ಟವಾಗುತ್ತಿದೆ ಎಂದಿತ್ತು.

Comments are closed.