ರಾಷ್ಟ್ರೀಯ

ಸ್ವಯಂಘೋಷಿತ ದೇವಮಾನವನಿಂದ ಅನುಯಾಯಿ ಮೇಲೆ ಅತ್ಯಾಚಾರ: ಜೀವಾವಧಿ ಶಿಕ್ಷೆ

Pinterest LinkedIn Tumblr


ಅಲ್ವಾರ್: ಅನುಯಾಯಿಯನ್ನು ಅತ್ಯಾಚಾರ ಮಾಡಿದ ಆರೋಪಕ್ಕೆ ಮತ್ತೊಬ್ಬ ಸ್ವಯಂಘೋಷಿತ ದೇವ ಮಾನವನನ್ನು ಬಂಧಿಸಲಾಗಿದೆ. ರಾಜಸ್ಥಾನದ ನ್ಯಾಯಾಲಯವೊಂದು ಕೌಶಲೇಂದ್ರ ಪ್ರಪನ್ನಾಚಾರ್ಯ ಅಲಿಯಾಸ್ ಫಲಾಹಾರಿ ಬಾಬಾಗೆ ಜೀವಾವಧಿ ಶಿಕ್ಷೆ ನೀಡಿದೆ. ಅಲ್ವಾರ್‌ ಮೂಲದ ಬಾಬಾಗೆ 1ಲಕ್ಷ ರೂ. ದಂಡ ವಿಧಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜೇಂದ್ರ ಶರ್ಮ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

”ಉತ್ತರ ಭಾರತದಲ್ಲಿ ಈ ಸನ್ಯಾಸಿಗೆ ಅಸಂಖ್ಯಾತ ಭಕ್ತರಿದ್ದಾರೆ. ಇನ್ನು, ಅತ್ಯಾಚಾರಕ್ಕೊಳಗಾಗಿರುವ 21 ವರ್ಷದ ಸಂತ್ರಸ್ಥೆ ಹಾಗೂ ಆಕೆಯ ಕುಟುಂಬ ಅವರನ್ನು ದೇವರಂತೆ ಕಾಣುತ್ತಿತ್ತು. ಹೀಗಾಗಿ, ಅಂತಹವರ ಮೇಲೆ ಅತ್ಯಾಚಾರ ನಡೆದರೆ ಜನ ಯಾರನ್ನು ನಂಬುತ್ತಾರೆ. ಹೀಗಾಗಿ, 58 ವರ್ಷದ ಫಲಾಹಾರಿ ಬಾಬಾಗೆ ಕಠಿಣ ಶಿಕ್ಷೆ ನೀಡಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಯೋಗೇಂದ್ರ ಸಿಂಗ್ ಖತಾನ ವಾದ ಮಾಡಿದ್ದರು.

ಇನ್ನು, ನ್ಯಾಯಾಧೀಶ ಶರ್ಮಾ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ”ಸಂತ್ರಸ್ಥೆ ಫಲಾಹಾರಿ ಬಾಬಾರನ್ನು ತಂದೆ ಹಾಗೂ ದೇವರಂತೆ ಪೂಜೆ ಮಾಡುತ್ತಿದ್ದರು. ಆದರೆ, ಬಾಬಾ ಈ ರೀತಿ ಮಾಡಿರುವುದು ಹೀನ ಕೃತ್ಯ. ಈ ರೀತಿ ಅಪರಾಧ ಮುಂದುವರಿದರೆ, ಧಾರ್ಮಿಕ ಗುರುಗಳ ವಿರುದ್ಧ ಜನತೆ ನಂಬಿಕೆ ಕಳೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ. ಈ ತೀರ್ಪನ್ನು ಅತ್ಯಾಚಾರ ಸಂತ್ರಸ್ಥೆಯ ತಂದೆ ಸ್ವಾಗತಿಸಿದ್ದು, ಇದು ನ್ಯಾಯಾಂಗದ ಗೆಲುವು ಎಂದಿದ್ದಾರೆ. ಆದರೆ, ಅತ್ಯಾಚಾರಿ ಬಾಬಾ ಪರ ವಕೀಲ ಅಶೋಕ್ ಶರ್ಮಾ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಆಗಸ್ಟ್ 7,2017ರಂದು ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ಛತ್ತೀಸ್‌ಗಢ ಮೂಲದ ಸಂತ್ರಸ್ಥೆ ಫಲಾಹಾರಿ ಬಾಬಾ ವಿರುದ್ಧ ಸೆಪ್ಟೆಂಬರ್ 11, 2017ರಲ್ಲಿ ದೂರು ದಾಖಲಿಸಿದ್ದರು. ನಂತರ, ಛತ್ತೀಸ್‌ಗಢ ಪೊಲೀಸರು ಅಲ್ವಾರ್‌ ಪೊಲೀಸರಿಗೆ ಈ ಕೇಸನ್ನು ವರ್ಗಾಯಿಸಿದ್ದರು. ಬಳಿಕ, ಜನವರಿ 11ರಿಂದ ಬಾಬಾ ವಿರುದ್ಧ ಅಲ್ವಾರ್ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದರು.

Comments are closed.