ರಾಷ್ಟ್ರೀಯ

ಮಾಜಿ ಮಂತ್ರಿ ಮಗನಿಂದ ತನ್ನ ಹೆಂಡತಿಯನ್ನು ಬಿಡಿಸಿಕೊಡಿ!

Pinterest LinkedIn Tumblr


ಮಧುರೈ: ಚೆನ್ನೈನಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಕಳೆದು ಹೋಗಿರುವ ತನ್ನ ಪತ್ನಿಯನ್ನು ಹುಡುಕಿಕೊಡಿ ಎಂದು ಮದ್ರಾಸ್‌ ಹೈಕೋರ್ಟ್‌ಗೆ ಹೆಬಿಯಸ್‌ ಕಾರ್ಪಸ್‌ ಅರ್ಜಿ ಹಾಕಿದ್ದಾರೆ.

3ನೇ ವರ್ಷದ ಕಾನೂನು ಪದವಿ ಓದುತ್ತಿದ್ದ ತನ್ನ ಪತ್ನಿಯನ್ನು ಮಾಜಿ ಮಂತ್ರಿಯ ಮಗ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಚೆನ್ನೈನ ವೆಲಚೆರಿ ನಿವಾಸಿ ಕೆ ವಿಜಯ್‌ ರಾಜೇಶ್‌ ಕುಮಾರ್‌ 2011ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ. ಮದುವೆಯಾಗಿ, ಮಕ್ಕಳಾದ ಮೇಲೆ ಪತ್ನಿ ಮುಂದೆ ಓದಬೇಕು ಎಂಬ ಆಶಯ ವ್ಯಕ್ತ ಪಡಿಸಿದ್ದರು. ಇದಕ್ಕೆ ಸ್ಪಂದಿಸಿದ ಪತಿ ಚೆನ್ನೈನ ತಾರಾಮಣಿಯಲ್ಲಿರುವ ಸ್ಕೂಲ್‌ ಆಫ್‌ ಎಕ್ಸೆಲೆನ್ಸ್‌ ಇನ್‌ ಲಾ ಕಾಲೇಜಿಗೆ ಪತ್ನಿಯನ್ನು ಸೇರಿದ್ದರು.

ಪ್ರಸ್ತುತ ಅಂತಿಮ ವರ್ಷದ ಪದವಿಯಲ್ಲಿರುವ ಪತ್ನಿ ಸಹಪಾಠಿಯೊಬ್ಬನ ಜತೆ ಸಂಬಂಧ ಬೆಳೆಸಿದ್ದಾಗಿ, ಮಕ್ಕಳನ್ನು ಬಿಟ್ಟು ಮನೆಬಿಟ್ಟು ತೆರಳಿದ್ದಾಗಿ ದೂರಿನಲ್ಲಿ ವಿಜಯ್‌ ವಿವರಿಸಿದ್ದಾರೆ.

Comments are closed.