ರಾಷ್ಟ್ರೀಯ

ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಕಳ್ಳತನ ಮಾಡಿದ ಬಾಲಕ

Pinterest LinkedIn Tumblr


ನಾಗಪುರ: ಲಿಂಗ ಬದಲಾವಣೆ ಸರ್ಜರಿಗೆ ಒಳಗಾಗುವ ಉದ್ದೇಶದಿಂದ ಸೋದರತ್ತೆಯ 50 ತೊಲ ಬಂಗಾರ ಕಳವು ಮಾಡಿದ್ದ 14ರ ಬಾಲಕನನ್ನು ಮಹಾರಾಷ್ಟ್ರದ ಲಕಡ್‌ಗಂಜ್ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದಾರೆ.

ಮುಂಬಯಿಯ ಬಾರ್‌ಗಳಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುವ ಯುವತಿಯರ ಜೀವನಶೈಲಿಯ ಕುರಿತು ಬಾಲಕ ಪ್ರಭಾವಿತನಾಗಿದ್ದು, ಆತನ ಅತ್ತೆ ಮತ್ತು ಮಹಿಳೆಯೋರ್ವಳ ಮಾತು ಕೇಳಿ ಮನಪರಿವರ್ತನೆ ಮಾಡಿಕೊಂಡಿದ್ದ.

ಲಿಂಗ ಬದಲಾವಣೆ ಸರ್ಜರಿಗೆ ಒಳಗಾಗಲು ಹಣದ ಅಗತ್ಯವಿದ್ದಿದ್ದರಿಂದ ಚಿನ್ನ ಕಳ್ಳತನ ಮಾಡಿ ಅದರೊಂದಿಗೆ ಆ. 7ರಂದು ಪರಾರಿಯಾಗಿದ್ದ. ಬಾಲಕನನ್ನು ಸೆ. 17ರಂದು ಪತ್ತೆಹಚ್ಚಿದ ಪೊಲೀಸರು, ಆತನನ್ನು ಜತೆಗಿರಿಸಿಕೊಂಡಿದ್ದ ರೆಹಾನ ಧನಾವತ್, ಇಮ್ರಾನ್ ಶರೀಫ್, ಫಾರೂಕ್ ಶೇಖ್ ಮತ್ತು ಪ್ರಶಾಂತ್ ಜಂಗ್ಡೆ ಎಂಬ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 30 ತೊಲ ಚಿನ್ನ, 1 ದ್ವಿಚಕ್ರ ವಾಹನ, 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಅವರನ್ನು ನಾಲ್ಕು ದಿನ ಪೊಲೀಸ್ ವಶಕ್ಕೆ ನೀಡಿ ವಿಚಾರಣೆಗೊಳಪಡಿಸಿದಾಗ, ಬಾಲಕನ ಕಳ್ಳತನ ಮತ್ತು ಪರಾರಿ ಪ್ರಕರಣದ ಬಗ್ಗೆ ಮಾಹಿತಿ ದೊರೆತಿದೆ.

ಬಾಲಕ ಲಿಂಗ ಪರಿವರ್ತನೆ ಮಾಡಿಸಿಕೊಂಡು ಹೆಣ್ಣಾಗಿ ಮುಂಬಯಿಯಲ್ಲೇ ನೆಲೆಯೂರಲು ಯೋಜನೆ ರೂಪಿಸಿದ್ದ.

Comments are closed.