ರಾಷ್ಟ್ರೀಯ

ಪ್ರಥಮ ಚಿಕಿತ್ಸೆ ನೀಡಿದ ಬಳಿಕ ತಿಳಿಯಿತು ತೀರಿಕೊಂಡವನು ಅದೇ ನರ್ಸ್‌ ನ ಪತಿಯೆಂದು!

Pinterest LinkedIn Tumblr


ಸೇಲಂ: ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ನರ್ಸ್‌ಗೆ ಆತನೇ ತನ್ನ ಪತಿಯೆಂದು ತಿಳಿದುಬಂದಿದ್ದು, ಅಷ್ಟರಲ್ಲಾಗಲೇ ಆತ ಮೃತಪಟ್ಟ ಪ್ರಕರಣ ತಮಿಳುನಾಡಿನ ಸೇಲಂನಲ್ಲಿ ವರದಿಯಾಗಿದೆ.

ಸೇಲಂನ ಮೆಚ್ಚೇರಿಯ ನಿವಾಸಿ ಶ್ರೀನಿವಾಸನ್ ಪತ್ನಿ ಶಿವಗಾಮಿ ಒಮಲೂರ್ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾನುವಾರ ಶ್ರೀನಿವಾಸ್ ಮೆಚ್ಚೇರಿಯಿಂದ ಸೇಲಂಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಕಾರು ಬಡಿದು ತೀವ್ರ ಗಾಯಗೊಂಡಿದ್ದರು.

ತಲೆಗೆ ಮತ್ತು ಮುಖಕ್ಕೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಒಮಲೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಶಿವಗಾಮಿ ತುರ್ತುಚಿಕಿತ್ಸಾ ವಿಭಾಗಕ್ಕೆ ದಾಖಲಾದ ರೋಗಿಗೆ ಪ್ರಥಮಚಿಕಿತ್ಸೆ ನೀಡುತ್ತಾ ಮುಖದ ಮೇಲಿನ ರಕ್ತ ಮತ್ತು ಗಾಯವನ್ನು ಶುಚಿಗೊಳಿಸುವ ಸಂದರ್ಭ ಆ ವ್ಯಕ್ತಿಯೇ ತನ್ನ ಪತಿಯೆಂದು ಗೊತ್ತಾಗಿದೆ.

ಆದರೆ ಅದಾಗಲೇ ಶ್ರೀನಿವಾಸನ್ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಪತಿಗೇ ತುರ್ತುಚಿಕಿತ್ಸೆ ನೀಡಿದ ನರ್ಸ್ ನಂತರ ಅಲ್ಲಿಯೇ ಸಾವನ್ನಪ್ಪಿದ್ದ ಪತಿಯ ಶವ ಕಂಡು ಆಲಂಗಿಸಿ, ಕುಸಿದಿದ್ದಾರೆ. ಆಸ್ಪತ್ರೆಗೆ ದಾಖಲಿಸಲು ತಡವಾಗಿದ್ದರಿಂದ ಶ್ರೀನಿವಾಸನ್ ವಿಪರೀತ ರಕ್ತಸ್ರಾವಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಮಲೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೂಲ ವರದಿ: ತಮಿಳು ಸಮಯಂ

Comments are closed.