ರಾಷ್ಟ್ರೀಯ

ಯುವತಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಪ್ರಿಯಕರ ! ಕಾರಣವೇನು ಗೊತ್ತೇ..?

Pinterest LinkedIn Tumblr

ಇಂದೋರ್: ಮಾಡ್ರನ್ ಲೈಫ್ ಸ್ಟೈಲ್ ಗೆ ಮಾರು ಹೋಗಿ ಸಿಕ್ಕಾಪಟ್ಟೆ ಬಾಯ್ ಫ್ರೆಂಡ್ಸ್ ಗಳನ್ನು ಹೊಂದಿದ್ದ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ 25ರ ಹರೆಯದ ಯುವತಿಯನ್ನು ಆಕೆಯ ಪ್ರಿಯಕರ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.

ಮಾಡ್ರನ್ ಲೈಫ್ ಸ್ಟೈಲ್ ಗೆ ಮಾರು ಹೋಗಿ ವಿಲಾಸಿ ಜೀವನ ನಡೆಯುತ್ತಿದ್ದ 25 ವರ್ಷದ ಸುಪ್ರೀಯಾ ಜೈನ್ ರನ್ನು ಕಮಲೇಶ್ ಸಾಹು ಎಂಬಾತ ಕುಡುಗೋಲಿನಿಂದ 38 ಬಾರಿ ಕೊಚ್ಚಿ ಕೊಲೆ ಮಾಡಿದ್ದಾನೆ.

ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಮಲೇಶ್ ಸಾಹು ಸುಪ್ರಿಯಾ ಜೈನ್ ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಇದಕ್ಕೆ ಸುಪ್ರಿಯಾ ತನಗೆ ಒಂದು ಕೆಲಸ ಸಿಕ್ಕ ಮೇಲೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಇದನ್ನೇ ನಂಬಿಕೊಂಡಿದ್ದ ಸಾಹುಗೆ ನಂತರ ಆಕೆ ವಿಲಾಸಿ ಜೀವನ ನಡೆಸುತ್ತಿದ್ದು ಸಿಕ್ಕಾಪಟ್ಟೆ ಬಾಯ್ ಫ್ರೆಂಡ್ಸ್ ಹೊಂದಿದ್ದಾಳೆ ಎಂಬ ಆಕ್ರೋಶದಿಂದ ಆಕೆಯನ್ನು ಕೊಲ್ಲಬೇಕು ಎಂದು ತೀರ್ಮಾನಕ್ಕೆ ಬಂದಿದ್ದ.

ಅಂತೆ ಕಳೆದ ಗುರುವಾರ ಆಕೆ ಊಟಕ್ಕೆಂದು ಕಚೇರಿಯಿಂದ ಹೊರಗೆ ಬರುತ್ತಿದ್ದುದ್ದನ್ನು ಗಮನಿಸಿದ ಸಾಹು ಕೂಡಲೇ ಓಡಿ ಬಂದು ಆಕೆಯ ಜಡೆಯನ್ನು ಹಿಡಿದು ಏಳೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯನ್ನು ರಕ್ಷಿಸಲು ಮುಂದಾದ ಇಬ್ಬರಿಗೆ ಹತ್ತಿರ ಬಂದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ. ಹೆದರಿದ ಸಹೋದ್ಯೋಗಿಗಳು ಕೂಡಲೇ 100ಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ಬರುವಷ್ಟರಲ್ಲೇ ಸಾಹು ಆಕೆಯನ್ನು ಕೊಚ್ಚಿ ರಕ್ತದ ಮಡುವಿನಲ್ಲಿ ಕುಳಿತ್ತಿದ್ದಾನೆ. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಆತಂಕಕಾರಿ ವಿಷಯಗಳು ಬಯಲಿಗೆ ಬಂದಿದೆ.

ಗಂಭೀರ ಗಾಯಗಳಿಂದ ನರಳುತ್ತಿದ್ದ ಸುಪ್ರಿಯಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದ ಶುಕ್ರವಾರ ಆಕೆ ಮೃತಪಟ್ಟಿದ್ದಾಳೆ.

Comments are closed.