ರಾಷ್ಟ್ರೀಯ

ಬೇರೆ ವ್ಯಕ್ತಿಯೊಬ್ಬರ ಕಾರನ್ನು 12 ಮಂದಿಗೆ ಮಾರಲು ಮುಂಗಡ ಪಡೆದು ವಂಚನೆ!

Pinterest LinkedIn Tumblr


ಪುಣೆ: ವಿಜಯ್‌ ಗುರ್ಜರ್‌ ಎಂಬವರ ಕಾರನ್ನು ಅವರಿಗೇ ಗೊತ್ತಿಲ್ಲದಂತೆ ಮಾರಾಟಕ್ಕಿಟ್ಟು, 12 ಮಂದಿಯಿಂದ ಮುಂಗಡ ಹಣ ಪಡೆದುಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ವಿಜಯ್‌ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮಗನಿಗೆ ಕಾರು ಅಫಘಾತವಾದ ಬಳಿಕ ನೀಲಿ ಬಣ್ಣದ ಬೋಲ್ಟ್‌ ಕಾರನ್ನು ಮಾರಾಟ ಮಾಡಲು ಮುಂದಾದ ವಿಜಯ್‌, ಆನ್‌ಲೈನ್‌ನಲ್ಲಿ ಸಂಪೂರ್ಣ ವಿವರ ಹಾಕಿದ್ದರು. ಕೆಲಸ ಸಮಯದ ಬಳಿಕ ಕಾರು ಮಾರಾಟದ ಯೋಚನೆಯನ್ನು ಕೈ ಬಿಟ್ಟಿಟ್ಟು, ಆನ್‌ಲೈನ್‌ನಲ್ಲಿದ್ದ ಕಾರಿನ ವಿವರಗಳನ್ನು ತೆಗೆದಿದ್ದಾರೆ.

ಈ ನಡುವೆ ರಾಜಸ್ಥಾನದಿಂದ ಚಂದ್ರಕಾಂತ್‌ ಮದನೆ ಎಂಬಾತ ಕರೆ ಮಾಡಿ, ಕಾರಿನ ಫೋಟೋ ಹಾಗೂ ವಿವರಗಳನ್ನು ಕೇಳಿದ್ದಾನೆ. ಆನ್‌ಲೈನ್‌ ಮೂಲಕವೇ ವಿಜಯ್‌ ಕಳುಹಿಸಿಕೊಟ್ಟಿದ್ದಾರೆ. ಆ ಬಳಿಕ ಈ ವ್ಯಕ್ತಿ ವಿಜಯ್‌ನನ್ನು ಸಂಪರ್ಕಿಸಿರಲಿಲ್ಲ.

ಕಾರು ಮಾರಾಟದ ವಿಚಾರ ಯೋಚನೆ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ವಿಜಯ್‌ ಸಹ ತಲೆಕೆಡಿಸಿಕೊಂಡಿರಲಿಲ್ಲ.

ಇತ್ತೀಚೆಗೆ ವ್ಯಕ್ತಿಯೋರ್ವ ಕರೆ ಮಾಡಿ, ವಿಜಯ್‌ ಬಳಿ ಕಾರು ಯಾವಾಗ ಹಸ್ತಾಂತರಿಸುತ್ತೀರಿ ಎಂದು ಕೇಳಿದ್ದಾನೆ. ಈ ವೇಳೆ ವಿಜಯ್‌, ಕಾರು ಈಗ ಮಾರಾಟಕ್ಕಿಲ್ಲ ಎಂದು ಹೇಳಿದ್ದಾರೆ. ಆ ವೇಳೆ ಆ ವ್ಯಕ್ತಿ ನಾನು ಮುಂಗಡ ಹಣವೂ ಪಾವತಿಸಿದ್ದಾಗಿದೆ ಎಂದಿದ್ದಾನೆ. ಅಲ್ಲದೆ ಚಂದ್ರಕಾಂತ್‌ ಎಂಬಾತನಿಗೆ ವಿಜಯ್‌ ಕಳುಹಿಸಿದ ಫೋಟೋ, ದಾಖಲೆಗಳನ್ನು ಮತ್ತೆ ತೋರಿಸಿದ್ದಾನೆ.

ಚಂದ್ರಕಾಂತ್‌ ಎಂಬವ ಖರೀದಿದಾರನ ಸೋಗಿನಲ್ಲಿ ಬಂದು ಮೋಸ ಮಾಡಿರುವುದು ಬಳಿಕ ತಿಳಿದು ಬಂದಿದೆ. ಅಲ್ಲದೆ ವಿಜಯ್‌ ಅವರ ಕಾರನ್ನು ತೋರಿಸಿ, 12 ಮಂದಿಯಿಂದ ಮುಂಗಡ ಹಣ ಪಡೆದುಕೊಂಡಿರುವುದು ಗೊತ್ತಾಗಿದೆ. ಸುಮಾರು 28 ಸಾವಿರ ರೂ. ಎಲ್ಲರಿಂದ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು, ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

Comments are closed.