ರಾಷ್ಟ್ರೀಯ

ಬಿಹಾರದಲ್ಲಿ ಬೌದ್ದ ಸನ್ಯಾಸಿಯಿಂದ 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ

Pinterest LinkedIn Tumblr

ಬೋಧ್ ಗಯಾ: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ವಿಶ್ವವಿಖ್ಯಾತ ಬೋಧ್ ಗಯಾದಲ್ಲಿ ಧ್ಯಾನ ಕೇಂದ್ರ ಮತ್ತು ಶಾಲೆಯನ್ನು ನಡೆಸುತ್ತಿದ್ದ ಬೌದ್ದ ಸನ್ಯಾಸಿಯನ್ನು ಬಂಧಿಸಲಾಗಿದೆ.

ಬಂಧಿತ ಸನ್ಯಾಸಿ ಶಾಲೆಯಲ್ಲಿನ 15 ಬಾಲಕರಿಗೆ ಲೈಂಗಿಕ ದೌರ್ಜನ್ಯ ನಿಡಿದ್ದನೆಂದು ಪೊಲೀಸರು ಹೇಳಿದ್ದಾರೆ.. ಭೋದ್ ಗಯಾದ ಮಸ್ತಿಪುರ್ ಗ್ರಾಮದ ಪ್ರಸನ್ನ ಜ್ಯೋತಿ ಬುದ್ದಿಸ್ಟ್ ಸ್ಕೂಲ್ ಅಂಡ್ ಮೆಡಿಟೇಷನ್ ಸೆಂಟರ್ ನಲ್ಲಿ ಈ ಲೈಂಗಿಕ ದೌರ್ಜನ್ಯ ನಡೆದ ವರದಿಯಾಗಿದೆ.

ದೌರ್ಜನ್ಯಕ್ಕೊಳಗಾದ ಬಾಲಕರು ಅಸ್ಸಾಂ ನ ಕರ್ಬಿ ಅಂಗ್‍ಲಾಂಗ್ ಜಿಲ್ಲೆಯವರಾಗಿದ್ದು ಅವರೆಲ್ಲಾ ಈ ವಿದ್ಯಾಕೇದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಸಧ್ಯ ಸನ್ಯಾಸಿಯನ್ನು ತೀವ್ರ ವಿಚಾರಣೆಗೆ ಒಲಪಡಿಸಲಾಗಿದ್ದು ಸಂತ್ರಸ್ಥ ಬಾಲಕರನ್ನು ಸಹ ಮಹಿಳಾ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ. “ಬೌದ್ದ ಗುರು ನಮ್ಮ ಮೇಲೆ ಹಲ್ಲೆ ನಡೆಸಿ ಹಿಂಸಿಸುತ್ತಿದ್ದರಲ್ಲದೆ ಕೆಟ್ಟ ಬಗೆಯಲ್ಲಿ ನಡೆದುಕೊಳ್ಳುತ್ತಿದ್ದರು. ಒಂದು ವೇಳೆ ನಾವು ಅವರ ಮಾತನ್ನು ಕೇಳದೆ ಹೋದಲ್ಲಿ ಬಲವಾದ ಹೊಡೆತ ಬೀಳುತ್ತಿತ್ತು. ಇದರಿಂದ ನಮಗೆಲ್ಲಾ ಭಯವಾಗಿತ್ತು ” ಎಂದು ನೊಂದ ವಿದ್ಯಾರ್ಥಿಗಳು ಹೇಳಿದ್ದಾರೆ.

Comments are closed.