
ಈ ಹಿಂದೆ ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿ ಎಳೆದು ಕ್ರೌರ್ಯ ಮೆರೆದ ಕಾರಣಕ್ಕೆ ಸುದ್ದಿಯಾಗಿದ್ದ ಮೇಜರ್ ಲಿತುಲ್ ಗೊಗೋಯ್ ಮತ್ತೊಂದು ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದಾರೆ. ಈ ಸಂಬಂಧ ಮೇಜರ್ ಗೊಗೋಯ್ ಮೇಲೆ ಕ್ರಮ ಜರುಗಿಸುವಂತೆ ಸೇನೆಗೆ ಕೋರ್ಟ್ ಆದೇಶಿಸಿದೆ.
ಶ್ರೀನಗರ ಹೋಟೆಲ್ ಗಲಾಟೆ ಪ್ರಕರಣದ ಹಿನ್ನಲೆ ಮೇಜರ್ ಲಿತುಲ್ ಗೊಗೋಯ್ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆತ ತಪ್ಪಿತಸ್ಥನಾಗಿದ್ದ ಅವರ ಮೇಲೆ ಶಿಸ್ತುಕ್ರಮ ಜಾರಿ ಮಾಡಿ ಆದೇಶ ನೀಡಿದೆ,
ಗೋಗಯ್ ಸ್ಥಳೀಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ ಹಾಗೂ ಕೆಲಸದಲ್ಲಿ ಪ್ರಮಾಣಿಕವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಮೇ.23ರಂದು ಗೋಗಯ್ 18 ವರ್ಷದ ಯುವತಿಯೊಂದಿಗೆ ಹೋಟೆಲ್ ಪ್ರವೇಶಿಸಲು ಮುಂದಾದಾಗ ವಾಗ್ವಾದ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು.
ಇದಾದ ಬಳಿಕ ಈ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗೊಗೋಯ್ ಯಾವುದೇ ಅಪರಾಧ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೆ ಅವರಿಗೆ ಶಿಕ್ಷೆಯನ್ನು ವಿಧಿಸಲಾಗುವುದು ಎಂದಿದ್ದರು.
“ಭಾರತೀಯ ಸೇನೆಯ ಯಾವುದೇ ವ್ಯಕ್ತಿ ಅಪರಾಧ ಪ್ರಕ್ರಿಯೆಯಲ್ಲಿ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ರಾವತ್ ತಿಳಿಸಿದ್ದರು
ಕಳೆದ ವರ್ಷಕೂಡ ಕಲ್ಲು ತೂರಾಟಗಾರರಿಂದ ರಕ್ಷಿಸಿಕೊಳ್ಳಲು ಸೇನೆಯ ಜೀಪಿನ ಮುಂಣಭಾಗಕ್ಕೆ ಕಾಶ್ಮೀರಿ ಯುವಕನನ್ನು ಕಟ್ಟಿ ಗಾಡಿ ಚಲಾಯಿಸಿದ್ದರು.
Comments are closed.