ರಾಷ್ಟ್ರೀಯ

ಯಮುನಾ ನದಿ ತೀರದಲ್ಲಿ ವಾಜಪೇಯಿಯ ಅಂತಿಮ ವಿದಾಯಕ್ಕೆ ಸಕಲ ಸಿದ್ಧತೆ

Pinterest LinkedIn Tumblr

ನವದೆಹಲಿ: ಚಿರನಿದ್ರೆಗೆ ಜಾರಿದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಅಂತಿಮ ವಿದಾಯ ಹೇಳಲು ಯಮುನಾ ನದಿ ತೀರದಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಬಿಗಿ ಭದ್ರತೆಯೊಂದಿಗೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಯಮುನಾ ನದಿ ತೀರದಲ್ಲಿರುವ ಜವಾಹರ್ ಲಾಲಿ ನೆಹರೂ (ಶಾಂತಿವನ) ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ (ವಿಜಯ್ ಘಾಟ್) ಅವರುಗಳ ಸಮಾಧಿಗಳ ನಡುವೆ, ಮಾಜಿ ಪ್ರಧಾನಿ ಗ್ಯಾನಿಜೇಲ್ ಸಿಂಗ್ ಅವರ ಸಮಾಧಿ ಏಕ್ತಾ ಸ್ಥಳ ಸಮೀಪ ರಾಷ್ಟ್ರೀಯ ಸ್ಮೃತಿ ಸ್ಥಳವಿದೆ.

ಮಾಜಿ ಪ್ರಧಾನಿಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗಳು ಮತ್ತಿತರ ಪ್ರಮುಖ ರಾಷ್ಟ್ರೀಯ ನಾಯಕರು ನಿಧನರಾದಾಗ ಅಂತ್ಯ ಸಂಸ್ಕಾರ ನಡೆಸಲು ಈ ಸ್ಥಳವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಹಿಂದೆ ರಾಷ್ಟ್ರೀಯ ನಾಯಕರು ಮೃತಪಟ್ಟಾಗ ರಾಜ್ ಘಾಟ್ ಬಳಿ ವಿಶಾಲವಾದ ಪ್ರದೇಶದಲ್ಲಿ ಅವರ ಅಂತ್ಯ ಸಂಸ್ಕಾರ ಮಾಜಿ ಸಮಾಧಿ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಸಮಾಧಿಗಳನ್ನು ನಿರ್ಮಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿರುವುದರಿಂದ ರಾಷ್ಟ್ರೀಯ ಸ್ಮತಿ ಸ್ಥಳ ನಿಗದಿಪಡಿಸಲಾಗಿದೆ. ಇಲ್ಲಿ ಅಂತ್ಯ ಸಂಸ್ಕಾರದ ವೇಳೆ ಬೃಹತ್ ಸಂಖ್ಯೆಯ ಜನಸಂಖ್ಯೆ ಭಾಗವಹಿಸಲು ಸ್ಥಳಾವಕಾಶವಿದೆ.

ರಾಷ್ಟ್ರ ರಾಜಧಾನಿಯಲ್ಲಿ ಯಮುನಾ ನದಿ ತೀರದಲ್ಲಿ ಸುಮಾರು 245 ಎಕರೆ ಜಮೀನು ವಿವಿಐಪಿಗಳ ಅಂತ್ಯ ಸಂಸ್ಕಾರಕ್ಕಾಗಿಯೇ ಮೀಸಲಿಡಲಾಗಿದೆ.

Comments are closed.