ರಾಷ್ಟ್ರೀಯ

ಟೆಕ್ನೋದಿಂದ ಮತ್ತೆರಡು ಅಗ್ಗದ ಫೋನ್ – ಕ್ಯಾಮಾನ್ ಐ ಏಸ್, ಸ್ಕೈ 2

Pinterest LinkedIn Tumblr


ಹೊಸದಿಲ್ಲಿ: ಹಾಂಕಾಂಗ್ ಮೂಲದ ಟ್ರಾನ್ಸ್‌ಶನ್ಸ್ ಹೋಲ್ಡಿಂಗ್ಸ್‌ನ ಟೆಕ್ನೋ (TECNO) ಬ್ರ್ಯಾಂಡ್‌ನ ಮತ್ತೆರಡು ಸ್ಮಾರ್ಟ್ ಫೋನ್‌ಗಳು ಇಂದು (ಆಗಸ್ಟ್ 13) ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಅಗ್ಗದ ದರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಗ್ರಾಹಕರ ಗಮನ ಸೆಳೆದಿದೆ.

ಭಾರತೀಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ 2ನೇ ತ್ರೈಮಾಸಿಕದಲ್ಲಿ ಶೇ.74ರಷ್ಟು ಪ್ರಗತಿ ಸಾಧಿಸಿರುವ ಟೆಕ್ನೋ, ಕ್ಯಾಮಾನ್ ಐ ಸೀರೀಸ್ ಮೂಲಕ ಅದ್ಭುತ ಕ್ಯಾಮೆರಾ ಸಾಮರ್ಥ್ಯದ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇಂದು ಬಿಡುಗಡೆಯಾಗಿರುವುದು ಕ್ಯಾಮಾನ್ ಐ ಏಸ್ (Tecno Camon iAce) ಹಾಗೂ ಕ್ಯಾಮಾನ್ ಐ ಸ್ಕೈ (Camon iSKY 2) ಹೆಸರಿನ ಮಾಡೆಲ್‌ಗಳು. ಹಬ್ಬದ ಸಡಗರದಲ್ಲಿ ಜಿಯೋ ಮೂಲಕ 2200 ರೂ. ಕ್ಯಾಶ್‌ಬ್ಯಾಕ್ ಕೊಡುಗೆಯೂ ಇದರಲ್ಲಿದೆ. ಐಏಸ್ ಮಾಡೆಲ್ ಇಂದಿನಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ, ಕ್ಯಾಮಾನ್ ಐಸ್ಕೈ2, ಆಗಸ್ಟ್ 20ರಿಂದ ಮಳಿಗೆಗಳಲ್ಲಿ ದೊರೆಯಲಿದೆ.

ಎರಡೂ ಫೋನ್‌ಗಳು 8 ಸಾವಿರ ರೂ. ಒಳಗೆ ಅತ್ಯುತ್ತಮ ಕ್ಯಾಮೆರಾ ಹಾಗೂ ಪೂರ್ಣ ಪರದೆ ಡಿಸ್‌ಪ್ಲೇ ಹೊಂದಿದ್ದು, ಗಮನ ಸೆಳೆದಿದೆ. ಎರಡರಲ್ಲೂ 13 MP AI ಹಿಂಭಾಗದ ಕ್ಯಾಮೆರಾ, AI ವೈಶಿಷ್ಟ್ಯದ ಸೆಲ್ಫೀ, 5.5 ಇಂಚು HD+ ಸ್ಕ್ರೀನ್, 18:9 ಫುಲ್ ವ್ಯೂ ಡಿಸ್‌ಪ್ಲೇ, 3050 mAh ಬ್ಯಾಟರಿ ಹಾಗೂ ಫೇಸ್ ಅನ್‌ಲಾಕ್ ವ್ಯವಸ್ಥೆ ಹೊಂದಿವೆ.

ಕ್ಯಾಮಾನ್ ಐ ಏಸ್:

ಅತ್ಯಾಧುನಿಕ ಫೇಸ್ ಐಡಿ (ಕ್ಯಾಮೆರಾ ಮೂಲಕ ಮುಖ ನೋಡಿ) ಸ್ಕ್ರೀನ್ ಅನ್‌ಲಾಕ್ ಮಾಡುವ ವ್ಯವಸ್ಥೆ ಇದರ ವಿಶೇಷತೆಗಳಲ್ಲೊಂದು.

Camon iAce ಮೊದಲ ಇಂಪ್ರೆಶನ್:
ನೋಡಿದ ತಕ್ಷಣ ಗಮನ ಸೆಳೆಯುವುದು ಇದರಲ್ಲಿರುವ ಫೇಸ್ ಐಡಿ ಮತ್ತು ಅತ್ಯಂತ ಹಗುರವಾದ ಸಾಧನವಿದು ಎಂಬುದು. 2 ಜಿಬಿ/16 ಜಿಬಿ ಮೆಮೊರಿ, ಮ್ಯಾಟ್ ಫಿನಿಶ್‌ನ ಯೂನಿಬಾಡಿ ವಿನ್ಯಾಸ ಜತೆಗೆ ಡ್ಯುಯಲ್ ಎಲ್ಇಡಿ ಫ್ಲ್ಯಾಶ್. ದೇಶಾದ್ಯಂತ 35000 ಮಳಿಗೆಗಳಲ್ಲಿ ಇಂದಿನಿಂದಲೇ ಮಾರಾಟಕ್ಕೆ ಲಭ್ಯ.

ಡಿಸ್‌ಪ್ಲೇ ಮತ್ತು ವಿನ್ಯಾಸ: 5.5” HD+ IPS ಫುಲ್ ವ್ಯೂ (18:9 ಆಸ್ಪೆಕ್ಟ್ ಅನುಪಾತ), 2D ಗ್ಲಾಸ್
ಸ್ಕ್ರೀನ್ ರೆಸೊಲ್ಯುಶನ್: 1440 X 720 ಪಿಕ್ಸೆಲ್ಸ್
ಸುತ್ತಳತೆ: 148.1×71.5×8.5
ಫ್ರಂಟ್ ಕ್ಯಾಮೆರಾ 8 ಮೆಗಾಪಿಕ್ಸೆಲ್, f2.0, ಡ್ಯುಯಲ್ ಫ್ಲ್ಯಾಶ್, AI ಬ್ಯೂಟಿ ಮತ್ತು AI ಪೋರ್ಟ್ರೇಟ್ ವೈಶಿಷ್ಟ್ಯಗಳಿವೆ
ಹಿಂದಿನ ಕ್ಯಾಮೆರಾ: 13 MP, F2.0 ಡ್ಯುಯಲ್ LED ಫ್ಲ್ಯಾಶ್, ಆಟೋ ಸೀನ್ ಡಿಟೆಕ್ಷನ್, ಎಐ ಬ್ಯೂಟಿ, ಬೊಕೇ, ಪನೋರಮಾ, ವೀಡಿಯೊ ಚಾಟ್, ಹೊಂದಿಸಬಹುದಾದ ಫ್ಲ್ಯಾಶ್ ಲೈಟ್
ಮೆಮೊರಿ: 2 GB RAM + 16GB ROM (128 GB ಗೆ ವಿಸ್ತರಿಸಬಹುದು)
ಬ್ಯಾಟರಿ: 3050 mAh
OS: ಆಂಡ್ರಾಯ್ಡ್ ಒರಿಯೋ 8.1 ಆಧಾರಿತ HiOS
ಪ್ರೊಸೆಸರ್: 1.5 GHz, 64-Bit ಮೀಡಿಯಾ ಟೆಕ್ ಕ್ವಾಡ್‌ಕೋರ್ ಪ್ರೊಸೆಸರ್ MT6739WW
ಸೆನ್ಸರ್‌ಗಳು: ಏಂಬಿಯಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, G ಸೆನ್ಸರ್
ವಿಶೇಷ: Face ID
ಕಾರ್ಡ್ ಸ್ಲಾಟ್: ನಾನ್-ಹೈಬ್ರಿಡ್, 3 ಕಾರ್ಡ್ ಸ್ಲಾಟ್ – 2 SIM ಕಾರ್ಡ್ + 1 ಮೆಮೊರಿ ಕಾರ್ಡ್ ಸ್ಲಾಟ್
ಸಂಪರ್ಕ: 2G GSM 850/900/1800/1900; 3G WCDMA B1/B5/B8; 4G B1/B3/B5/B8 /B38 /B40/ B41
ಬಣ್ಣಗಳು: ಮಿಡ್‌ನೈಟ್ ಬ್ಲ್ಯಾಕ್, ಶಾಂಪೇನ್ ಗೋಲ್ಡ್, ಮಿಡ್‌ನೈಟ್ ಬ್ಲೂ
ಬೆಲೆ: 6799 ರೂ.

ಕ್ಯಾಮಾನ್ ಐಏಸ್‌ಗಿಂತ ಐಸ್ಕೈ 2 ಮಾಡೆಲ್‌ನಲ್ಲಿ ಪ್ರಧಾನ ವ್ಯತ್ಯಾಸವೆಂದರೆ ಸೆಲ್ಫೀ ಕ್ಯಾಮೆರಾ. 8ರ ಬದಲು 13 ಮೆಗಾಪಿಕ್ಸೆಲ್ ಲೆನ್ಸ್ ಇದೆ. ಫೇಸ್ ಅನ್‌ಲಾಕ್ ಜತೆಗೆ ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆಯೂ ಇದೆ. ಉಳಿದಂತೆ ಎಲ್ಲ ಸ್ಪೆಸಿಫಿಕೇಶನ್‌ಗಳು ಏಸ್ ಮಾಡೆಲ್ ರೀತಿಯಲ್ಲೇ ಇವೆ. ಬೆಲೆ ರೂ. 7499.

ಜಿಯೋ ಜತೆಗೆ 198 ಹಾಗೂ 299 ರೂ. ಪ್ರೀಪೇಯ್ಡ್ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ 2,200 ರೂ. ತಕ್ಷಣದ ಕ್ಯಾಶ್‌ಬ್ಯಾಕ್ ಆಫರ್ ಇದೆ. ಅಂದರೆ ಮೈಜಿಯೋ ಖಾತೆಯ ಮೂಲಕ ರೀಚಾರ್ಜ್ ಮಾಡಿಸಿದರೆ ತಲಾ 50 ರೂ.ಗಳ 44 ಕ್ಯಾಶ್‌ಬ್ಯಾಕ್ ವೋಚರ್‌ಗಳು ಲಭ್ಯ. ಪ್ರತೀ ಬಾರಿ ರೀಚಾರ್ಜ್ ಮಾಡುವಾಗ ಒಂದೊಂದು ವೋಚರ್ ಬಳಸಬಹುದು.

ಈ ಹೊಸ ಮಾಡೆಲ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ, 6ರಿಂದ 14 ಸಾವಿರ ರೂ. ಒಳಗೆ ಒಟ್ಟು 7 ಮಾದರಿಯ ಟೆಕ್ನೋ ಮೊಬೈಲ್‌ಗಳು ದೊರೆಯುವಂತಾಗಿದೆ. ಎಲ್ಲವುಗಳಲ್ಲಿ 111 (1 ತಿಂಗಳು ವಿಸ್ತರಿತ ವಾರಂಟಿ, ವರ್ಷದಲ್ಲಿ ಒಮ್ಮೆ 1 ಟೈಮ್ ಸ್ಕ್ರೀನ್ ರೀಪ್ಲೇಸ್‌ಮೆಂಟ್, 1 ನೂರು ದಿನಗಳ ರೀಪ್ಲೇಸ್‌ಮೆಂಟ್) ಷರತ್ತುಬದ್ಧ ಭರವಸೆ ಲಭ್ಯವಿದೆ.

Comments are closed.