ರಾಷ್ಟ್ರೀಯ

ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಪಾಕ್ ಜೈಲಲ್ಲಿದ್ದ ಭಾರತೀಯನಿಗೆ 36 ವರ್ಷಗಳ ಬಳಿಕ ಮುಕ್ತಿ

Pinterest LinkedIn Tumblr

ಜೈಪುರ: ಆತ 36 ವರ್ಷದ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಆತನಿಗಾಗಿ ಶೋಧ ನಡೆಸುತ್ತಿದ್ದ ಕುಟುಂಬಕ್ಕೆ ಸುಳಿವು ಸಿಕ್ಕಿದ್ದು ಕಳೆದ ಮೇ ತಿಂಗಳಲ್ಲಿ. ಮತ್ತೀಗ ಆತ ತನ್ನವರನ್ನು ಸೇರುತ್ತಿದ್ದಾನೆ. ಅಷ್ಟಕ್ಕೂ ಆತ ಇಷ್ಟು ವರ್ಷ ಎಲ್ಲಿದ್ದ ಗೊತ್ತೇ? ಪಾಕಿಸ್ತಾನದ ಜೈಲಿನಲ್ಲಿ.

ಜೈಪುರದಲ್ಲಿ ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದ ಗಜೇಂದ್ರ ಶರ್ಮಾ 1982ರಲ್ಲಿ ಕಾಣದಾಗಿದ್ದ. ಆಗ ಆತನಿಗೆ 40ರ ಪ್ರಾಯ. ಆತನಿಗೆ ಎರಡು ಗಂಡು ಮಕ್ಕಳಿದ್ದು, ಮತ್ತೀಗ 6 ಜನ ಮೊಮ್ಮಕ್ಕಳು ಸಹ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಆತ ಲಾಹೋರಿನ ಲಖ್ಪತ್ ಜೈಲಿನಲ್ಲಿ ಪತ್ತೆಯಾಗಿದ್ದು, ಆಗಸ್ಟ್ 13ಕ್ಕೆ ಬಿಡುಗಡೆಯಾಗುತ್ತಿದ್ದಾನೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕುಟುಂಬದವರಿಗೆ ಸೂಚನೆ ನೀಡಿದೆ.

ನನ್ನ ತಂದೆ ಈ ತಿಂಗಳ 13ಕ್ಕೆ ಬಿಡುಗಡೆಯಾಗುತ್ತಾನೆಂದು ಹೇಳಲಾಗಿದೆ ಆತ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಿಸಲು ದೇಶದಲ್ಲಿರಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ, ಎನ್ನುತ್ತಿದ್ದಾನೆ ತಾಯಿ ಮಖಾನಿ ದೇವಿ ಜತೆ ತಂದೆಗಾಗಿ ಕಾತುರದಿಂದ ಕಾಯುತ್ತಿರುವ ಮಗ ಮುಕೇಶ್.

ಶರ್ಮಾ ಜೈಪುರಕ್ಕೆ ಮರಳುತ್ತಿದ್ದಂತೆ ಕುಟುಂಬ ಹಬ್ಬವನ್ನಾಚರಿಸಲು ನಿರ್ಧರಿಸಿದೆ. ಆತ ಯಾಕಾಗಿ ಬಂಧಿಸಲ್ಪಟ್ಟಿದ್ದ ಎಂಬುದು ತಿಳಿದು ಬಂದಿಲ್ಲ.

Comments are closed.