ರಾಷ್ಟ್ರೀಯ

ಕರುಣಾನಿಧಿಯ ಶವಪೆಟ್ಟಿಗೆ ಮೇಲೆ ಕೆತ್ತಿರುವ ಪದಗಳ ಹಿಂದಿರುವ ರಹಸ್ಯವೇನು?

Pinterest LinkedIn Tumblr


ಚೆನ್ನೈ: “ಎಂದಿಗೂ ವಿಶ್ರಾಂತಿ ಪಡೆಯದವನು ಈಗ ಚಿರ ನಿದ್ರೆಗೆ ಜಾರಿದ್ದಾನೆ”. ಈ ಸಂದೇಶ ತಮಿಳುನಾಡಿನ ಆರಾಧ್ಯದೈವ ಕರುಣಾನಿಧಿ ಚಿರ ವಿಶ್ರಾಂತಿ ಪಡೆಯಲು ಮಲಗುವ ಶವಪೆಟ್ಟಿಗೆಯ ಮೇಲಿದ್ದ ಪದಗಳು. ಈ ಪದಗಳನ್ನು 30 ವರ್ಷಗಳ ಹಿಂದೆಯೇ ಕಲೈಂಗರ್​ ತನ್ನ ಸಮಾಧಿ ಮೇಲೆ ಬರೆಸಲು ಆರಿಸಿಕೊಂಡಿದ್ದರು.

ಕವಿತೆ ಮತ್ತು ಸಾಹಿತ್ಯದ ಜೊತೆಗೆ ಪ್ರೇಮ ಪ್ರಕರಣಗಳಿಗೆ ಹೆಸರುವಾಸಿಯಾಗಿದ್ದ ಕಲೈಂಗರ್​ ಅವರ ಈ ಸಂದೇಶವು ಅವರ ಬದುಕಿನ ತಿರುಳನ್ನು ತಿಳಿಸುತ್ತದೆ. ಇಂತಹ ಧೀಮಂತ ನಾಯಕ ಬದುಕಿನುದ್ದಕ್ಕೂ ಹೋರಾಟ ನಡೆಸಿ ಈಗ ಚಿರನಿದ್ರೆಗೆ ಜಾರಿದ್ದಾನೆ.

ದ್ರಾವಿಡ ಚಳುವಳಿಯ ಕಡೆಯ ಕೊಂಡಿಯಾದ ಕರುಣಾನಿಧಿ ಅವರನ್ನು ಮರೀನಾ ಕಡಲ ತೀರದ ಬಳಿ ಸಮಾಧಿ ಮಾಡಲಾಗುತ್ತಿದೆ. ಅಲ್ಲಿ ಈಗಾಗಲೇ ಸಿ.ಎನ್​. ಅಣ್ಣಾದೊರೈ, ಎಂ.ಜಿ.ರಾಮಚಂದ್ರನ್​ ಮತ್ತು ಜೆ.ಜಯಲಲಿತಾ ಅವರ ಸಮಾಧಿಗಳಿವೆ.

ಈಗಾಗಲೇ ಮರೀನಾ ಬೀಚ್​ನತ್ತ ಕರುಣಾನಿಧಿ ಪಾರ್ಥಿವ ಶರೀರ ಮೆರವಣಿಗೆ ಮೂಲಕ ಸಾಗುತಲಿದ್ದು, ತಮಿಳುನಾಡಿನಾದ್ಯಂತ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಅಭಿಮಾನಿಗಳು ರಸ್ತೆಬದಿಯಲ್ಲಿ ಕಿಕ್ಕಿರಿದಿದ್ದಾರೆ. ಮರೀನಾ ಬೀಚ್​ ಬಳಿ ಅಣ್ಣಾದೊರೈ ಸಮಾಧಿಯ ಬಳಿ ಕರುಣಾನಿಧಿ ಅವರ ಮೃತದೇಹವನ್ನು ಹೂಳಲಾಗುತ್ತದೆ.

ಕರುಣಾನಿಧಿ ಮೃತದೇಹವನ್ನು ಇರಿಸುವ ಶವಪೆಟ್ಟಿಗೆ ಮೇಲೆ ತಮಿಳಿನಲ್ಲಿ ಈ ಪದಗಳನ್ನು ಕೆತ್ತಲಾಗಿದೆ. ಜೀವನದಲ್ಲಿ ಎಂದಿಗೂ ವಿಶ್ರಾಂತಿ ಪಡೆಯದೆ ಕಷ್ಟಪಟ್ಟು ಕೆಲಸ ಮಾಡಿದವನು ಈಗ ಇಲ್ಲಿ ನೆಮ್ಮದಿಯಾಗಿ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದು ಬರೆಯಲಾಗಿದೆ.

Comments are closed.