ಮಥುರಾ: ತನ್ನಲ್ಲಿದ್ದ ಗುಟ್ಕಾ ಪ್ಯಾಕನ್ನು ಹಂಚಿಕೊಳ್ಳಲು ನಿರಾಕರಿಸಿದ 32 ವರ್ಷ ಪ್ರಾಯದ ದಲಿತ ವ್ಯಕ್ತಿಗೆ ಇಬ್ಬರು ವ್ಯಕ್ತಿಗಳು ಕೋಪೋದ್ರಿಕ್ತರಾಗಿ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಪರ್‌ದೇಸಿ ಎಂಬ ದಲಿತ ವ್ಯಕ್ತಿಗೆ ರಾಹುಲ್ ಮತ್ತು ರಾಜು ಠಾಕೂರ್ ಎಂಬವರು ಮೊದಲು ಹಲ್ಲೆಗೈದು ಬಳಿಕ ಆತನಿಗೆ ಬೆಂಕಿ ಹಚ್ಚಿದರೆಂದು ಡಿವೈಎಸ್ಪಿ ವಿನಯ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಇದನ್ನು ಕಾಣುತ್ತಲೇ ಸುತ್ತಮುತ್ತಲಲ್ಲಿ ಇದ್ದವರು ಒಡನೆಯೇ ಧಾವಿಸಿ ಬಂದು ಬೆಂಕಿ ನಂದಿಸಿ ಪರ್‌ದೇಸಿಯನ್ನು ಪಾರುಗೊಳಿಸಿದರು.
20 ಶೇಕಡಾ ಸುಟ್ಟಗಾಯಗಳಿಗೆ ಗುರಿಯಾದ ಆತ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ; ಪ್ರಾಣಾಪಾಯದಿಂದ ಪಾರಾಗಿದ್ದಾನೆ; ತಲೆಮರೆಸಿಕೊಂಡಿರುವ ಆರೋಪಿಗಳಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದವರು ತಿಳಿಸಿದರು.
Comments are closed.