ರಾಷ್ಟ್ರೀಯ

ದೆಹಲಿಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಕೊಠಡಿಗೆ ಚಾಕು ಹಿಡಿದು ನುಗ್ಗಿಲು ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

Pinterest LinkedIn Tumblr

ನವದೆಹಲಿ: ದೆಹಲಿಯ ಕೇರಳ ಹೌಸ್ ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಹಿಡಿದುಕೊಂಡು ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

ಬೆಳಗ್ಗೆ 9.45ರ ವೇಳೆ ಪಿಣರಾಯಿ ವಿಜಯನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು, ಈ ವೇಳೆ ವಿಮಲ್ ಕುಮಾರ್ ಎಂಬಾತ ಚಾಕು ಹಿಡಿದು ನುಗ್ಗಲು ಯತ್ನಿಸಿದ್ದಾನೆ.

ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡು ಚಾಕು ಕಸಿದುಕೊಂಡಿದ್ದಾರೆ, ಆತ ಸಿಎಂ ಮುಂದೆ ಆತ್ಮಹತ್ಯೆ ಯತ್ನ ಮಾಡಲು ಬಂದಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ವರ್ಷ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಆರ್ ಎಸ್ ಎಸ್ ನಾಯಕರೊಬ್ಬರಿಂದ ಜೀವ ಬೆದರಿಕೆ ಬಂದಿತ್ತು, ಪಿಣರಾಯಾ ತಲೆ ಕತ್ತರಿಸುವವರಿಗೆ 1 ಕೋಟಿ ರು ಇನಾಮು ಕೊಡುವುದಾಗಿ ಘೋಷಿಸಿದ್ದರು.

Comments are closed.