ರಾಷ್ಟ್ರೀಯ

ರಾಜ್ಯದಲ್ಲಿ 23 ನಕಲಿ ಎಂಜಿನಿಯರಿಂಗ್‌ ಕಾಲೇಜು!

Pinterest LinkedIn Tumblr


ಹೊಸದಿಲ್ಲಿ: ಭಾರತದಲ್ಲಿ ಒಟ್ಟು 277 ನಕಲಿ ಎಂಜಿನಿರಿಂಗ್‌ ಕಾಲೇಜುಗಳಿದ್ದು, ಈ ಪೈಕಿ 23 ಕರ್ನಾಟಕದಲ್ಲಿವೆ ಎಂದು ಲೋಕಸಭೆಗೆ ಸರಕಾರ ಮಾಹಿತಿ ನೀಡಿದೆ.

66 ನಕಲಿ ಕಾಲೇಜುಗಳೊಂದಿಗೆ ದಿಲ್ಲಿ ಅಗ್ರಸ್ಥಾನದಲ್ಲಿದ್ದು, ತೆಲಂಗಾಣ 35 ಕಾಲೇಜುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಕೇಂದ್ರ ಮಾನವ ಸಂಪನ್ಮೂಲ ಸಹಾಯಕ ಸಚಿವ ಸತ್ಯ ಪಾಲ್‌ ಸಿಂಗ್‌ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಹ 24 ನಕಲಿ ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿದ್ದು, ಈ ಪೈಕಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿರುವ ‘ಬಡಗಣವಿ ಸರ್ಕಾರ್‌ ವಿಶ್ವ ಮುಕ್ತ ವಿಶ್ವವಿದ್ಯಾಲಯ ಶೈಕ್ಷಣಿಕ ಸೊಸೈಟಿ’ ಸಹ ಸೇರಿದೆ.

ನಕಲಿ ವಿವಿಗಳು ಮತ್ತು ಕಾಲೇಜುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನಕಲಿ ಕಾಲೇಜುಗಳ ರಾಜ್ಯವಾರು ಪಟ್ಟಿ
ಪ.ಬಂಗಾಳ: 27
ಉ.ಪ್ರದೇಶ: 22
ಹರಿಯಾಣ: 18
ಬಿಹಾರ: 17
ಮಹಾರಾಷ್ಟ್ರ: 16
ತಮಿಳುನಾಡು: 11
ಗುಜರಾತ್‌: 08
ಆಂಧ್ರ, ಚಂಡೀಗಢ: 07
ಪಂಜಾಬ್‌: 05
ಜಾರ್ಖಂಡ್‌: 04
ರಾಜಸ್ಥಾನ, ಉ.ಖಂಡ್‌: 03
ಗೋವಾ, ಕೇರಳ: 02
ಒಡಿಶಾ, ಹಿಮಾಚಲ ಪ್ರದೇಶ: 01

Comments are closed.