ರಾಷ್ಟ್ರೀಯ

ಮೇಕಪ್ ತೊಳೆದ ಬಳಿಕ ನಾಪತ್ತೆಯಾಯ್ತು ಟ್ಯೂಮರ್, ಅದು ಹೇಗೆ?

Pinterest LinkedIn Tumblr


ಚೆನ್ನೈ: ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಹೋಗುವವರಿದ್ದೀರಾ? ಹಾಗಾದರೆ ದಯವಿಟ್ಟು ಮೇಕಪ್ ಮಾಡಿಕೊಂಡು ಹೋಗಬೇಡಿ. ಅದ್ಯಾಕೆ ಅಂತೀರಾ? ಈ ಸುದ್ದಿಯನ್ನೊಮ್ಮೆ ಓದಿ. ನಿಮಗೆ ಅರ್ಥವಾಗುತ್ತದೆ.

ನಿರಂತರ ತಲೆ ನೋವಿನಿಂದ ಬಳಲುತ್ತಿದ್ದ 34 ವರ್ಷದ ಮಹಿಳೆಯೊಬ್ಬಳು ಚೆನ್ನೈನ ಕ್ರೋಮ್‌ಪೇಟ್‌ನಲ್ಲಿರುವ ಶ್ರೀ ಬಾಲಾಜಿ ವೈದ್ಯಕೀಯ ಕಾಲೇಜಿಗೆ ಪರೀಕ್ಷೆಗೆ ಬಂದಿದ್ದಳು.

ಆಕೆಯ ತಲೆನೋವಿಗೆ ಕಾರಣ ತಿಳಿಯಲು ಎಮ್‌ಆರ್‌ಐ ಸ್ಕಾನಿಂಗ್ ಮಾಡಿಸಿದ ವೈದ್ಯರಿಗೆ ಎಡಕಣ್ಣು ಗುಡ್ಡೆಯ ಮೇಲೆ ಅಸಹವಾದ ಟ್ಯೂಮರ್‌‌ ಕಾಣಿಸಿತು. ಎಲ್ಲ ಸ್ಯಾನಿಂಗ್ ಚಿತ್ರಗಳಲ್ಲಿ ಹೀಗಿರಲಿಲ್ಲ. ಕೆಲವು ಚಿತ್ರಗಳಲ್ಲಿ ಟ್ಯೂಮರ್ ಕಂಡರೆ ಮತ್ತೆ ಕೆಲವದರದಲ್ಲಿ ಕಾಣಿಸಲಿಲ್ಲ. ಮೊದಲು ಸಿಲಿಯರಿ ಟ್ಯೂಮರ್ ಎಂದುಕೊಂಡ ವೈದ್ಯರು ಏನೋ ವ್ಯತ್ಯಾಸವಾಗಿದೆ, ಏನಿರಬಹುದೆಂಬ ಯೋಚನೆಯಲ್ಲಿ ಬಿದ್ದರು. ಏನೇ ಆಗಲಿ ಸಂಪೂರ್ಣ ದೇಹವನ್ನು ಮತ್ತೊಮ್ಮೆ ಸ್ಕ್ಯಾನ್ ಮಾಡೋಣ ಎಂದು ನಿರ್ಧರಿಸಿದರು. ಪರೀಕ್ಷೆ ಮಾಡುವ ಮುನ್ನ ಅವರು ಆಕೆಗೆ ಮುಖಕ್ಕೆ ಹಚ್ಚಿದ್ದ ಮೇಕಪ್‌ನ್ನು ಸಂಪೂರ್ಣವಾಗಿ ತೊಳೆದುಕೊಂಡು ಬರುವಂತೆ ಸೂಚಿಸಿದ್ದರು.

ವೈದ್ಯರಂದುಕೊಂಡಂದು ಸತ್ಯವಾಗಿತ್ತು. ಎರಡನೇ ಸ್ಕ್ಯಾನಿಂಗ್ ವರದಿಯಲ್ಲಿ ಟ್ಯೂಮರ್ ಕಾಣಲಿಲ್ಲ.

ವಾಸ್ತವವೇನೆಂದರೆ ಮಹಿಳೆ ಕಣ್ಣಿಗೆ ಹಚ್ಚಿದ್ದ ಕಾಡಿಗೆ (ಕಾಜಲ್) ಸ್ಕ್ಯಾನಿಂಗ್ ವರದಿಯಲ್ಲಿ ಟ್ಯೂಮರ್ ಆಗಿ ಮೂಡಿಬಂದಿ ಇಷ್ಟೆಲ್ಲ ಆವಾಂತರ ಸೃಷ್ಟಿಸಿತ್ತು.

Comments are closed.