ರಾಷ್ಟ್ರೀಯ

ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನದಿಗೆ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿಯರಿಬ್ಬರ ಸಾವು !

Pinterest LinkedIn Tumblr

ಗೋಂಡಿಯಾ: ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನದಿಗೆ ಬಿದ್ದು ಇಬ್ಬರು ವಿದ್ಯಾರ್ಥಿನಿಯರು ದಾರುಣ ಸಾವನ್ನಪ್ಪಿರುವ ಘಟನೆ ಗೋಂಡಿಯಾ ಜಿಲ್ಲೆಯ ರಾಜೆಗಾಂವ್ ನಲ್ಲಿ ನಡೆದಿದೆ.

ಮಹಾರಾಷ್ಟ್ರದ ಗೋಂಡಿಯಾದಲ್ಲಿ ಈ ದುರ್ಘಟನೆ ನಡೆದಿದ್ದು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ 20 ವರ್ಷದ ಸಮತಾ ನಾಯ್ಕರೆ ಮತ್ತು ಮೇಘಾ ಸಹಾರೆ ಎಂಬುವರು ಮೃತ ದುರ್ದೈವಿಗಳು.

ಕಾಲೇಜು ಬಿಟ್ಟ ನಂತರ ನರ್ಸಿಂಗ್ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ತಿರುಗಾಟಕ್ಕೆಂದು ವಾಘ ನದಿಯ ಮೇಲ್ಭಾಗದ ಕೋರ್ ನಿ ಘಾಟಿನ ಬಳಿ ಹೋಗಿದ್ದರು.

Comments are closed.