ರಾಷ್ಟ್ರೀಯ

ಹಿಮಾಚಲ ಪ್ರದೇಶದಲ್ಲಿ 3.1 ಅಂಕಗಳ ತೀವ್ರತೆಯ ಭೂಕಂಪ

Pinterest LinkedIn Tumblr


ಶಿಮ್ಲಾ : ಹಿಮಾಚಲ ಪ್ರದೇಶದ ಕಾಂಗ್‌ಡಾ ಜಿಲ್ಲೆಯಲ್ಲಿಂದು ಮಂಗಳವಾರ ನಸುಕಿನ ವೇಳೆ ರಿಕ್ಟರ್‌ ಮಾಪಕದಲ್ಲಿ 3.1 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿತೆಂದು ಹವಾಮಾನ ಇಲಾಖೆ ವರದಿ ಮಾಡಿದೆ.

ನಸುಕಿನ 1.18ರ ಹೊತ್ತಿಗೆ ಕಾಂಗ್‌ಡಾ ಜಿಲ್ಲೆಯ ಒಳ – ಹೊರಗಿನ ಪ್ರದೇಶಗಳಲ್ಲಿ ಪಶ್ಚಾತ್‌ ಕಂಪನಗಳು ಜನರ ಅನುಭವಕ್ಕೆ ಬಂದು ಆತಂಕ ಸೃಷ್ಟಿಸಿತೆಂದು ವರದಿಯಾಗಿದೆ.

ಹಾಗಿದ್ದರೂ ಯಾವುದೇ ಜೀವ ಹಾನಿ, ಸೊತ್ತು ನಷ್ಟ ಉಂಟಾದ ವರದಿಗಳು ಬಂದಿಲ್ಲ.

ಭೂಕಂಪದ ಕೇಂದ್ರ ಬಿಂದು ಕಾಂಗ್‌ಡಾ ಜಿಲ್ಲೆಯಲ್ಲಿ ಹತ್ತು ಕಿ.ಮೀ.ನೆಲದಾಳದಲ್ಲಿ ಇತ್ತೆಂದು ಹವಾಮಾನ ಇಲಾಖೆ ಹೇಳಿದೆ.

ಕಳೆದ ಜು.25 ಮತ್ತು 27ರಂದು ಕಾಂಗ್‌ಡಾ ಜಿಲ್ಲೆಯಲ್ಲಿ ಅನುಕ್ರಮವಾಗಿ 2.9 ಮತ್ತು 3.8 ಅಂಕಗಳ ಲಘು ಪ್ರಮಾಣದ ಭೂಕಂಪ ಸಂಭವಿಸಿತ್ತೆಂದು ಹವಾಮಾನ ಇಲಾಖೆ ವರದಿ ಮಾಡಿತ್ತು.

Comments are closed.