ರಾಷ್ಟ್ರೀಯ

ರಜೆಯ ಮೇಲೆ ಮನೆಗೆ ಬಂದಿದ್ದ ಸೈನಿಕನನ್ನು ಗುಂಡಿಟ್ಟು ಹತ್ಯೆಗೈದ ಉಗ್ರರು!

Pinterest LinkedIn Tumblr


ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ CRPF ಯೋಧನ ಮನೆಯೊಳಗೆ ನುಗ್ಗಿದ ಉಗ್ರರು ಸೈನಿಕನನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಮೃತಪಟ್ಟ ಯೋಧನನ್ನು ನಾಸಿರ್​ ಅಹ್ಮದ್​ ರಾದರ್​ ಎಂದು ಗುರುತಿಸಲಾಗಿದ್ದು, ಆವರು ರಜೆಯ ಮೇಲೆ ಮನೆಗೆ ತೆರಳಿದ್ದ ಎನ್ನಲಾಗಿದೆ. ಲಭ್ಯವಾದ ಮಾಹಿತಿ ಅನ್ವಯ ನೈರಾ ಪುಲ್ವಾರಾ ಎಂಬ ಪ್ರದೇಶದಲ್ಲಿರುವ ಮನೆಗೆ ನುಗ್ಗಿದ ಉಗ್ರರು ನಾಸಿರ್​ರನ್ನು ಶೂಟ್​ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಾಸಿರ್​ರನ್ನು ಆ ಕೂಡಲೇ ಪುಲ್ವಾರಾದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ಕಾಶ್ಮೀರದ CRPF ನ 182 ಬೆಟಾಲಿಯನ್​ನಲ್ಲಿದ್ದ ನಾಸಿರ್​ ಪುಲ್ವಾನಾದಲ್ಲೇ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಕೆಲ ದಿನಗಳಲ್ಲಿ ಭಾರತೀಯ ಭದ್ರತಾ ಸಿಬ್ಬಂದಿಗಳ ಹತ್ಯೆ ನಡೆಯುತ್ತಿದ್ದು, ನಾಸಿರ್​ ಹತ್ಯೆಯಾದ ನಾಲ್ಕನೇ ಯೋಧರಾಗಿದ್ದಾರೆ. ಉಗ್ರರು ಸದ್ಯ ಕಾಶ್ಮೀರದಲ್ಲಿ ನೆಲೆಸಿರುವ ಯೋಧರನ್ನೇ ತಮ್ಮ ಗುರಿಯಾಗಿಸಿಕೊಳ್ಳುತ್ತಿದ್ದೃಆಎ. ಈದ್​ ಹಬ್ಬಕ್ಕೆಂದು ಮನೆಗೆ ಮರಳುತ್ತಿದ್ದ ಸೇನೆಯ ರೈಫಲ್​ ಮ್ಯಾನ್​ ಔರಂಗಜೇಬ್​ ಎಂಬವರನ್ನು ಅಪಹರಿಸಿದ್ದ ಉಗ್ರರು ಬಳಿಕ ಹತ್ಯೆಗೈದಿದ್ದರು. ಇದಾದ ಬಳಿಕ ಶೋಪಿಯಾಂದಲ್ಲಿ ರಜೆಯ ಮೇಲೆ ಮರಳಿದ್ದ ಪೊಲೀಸ್​ ಕಾನ್ಸ್​ಸ್ಟೇಬಲ್​ ಜಾವೆದ್​ ಅಹ್ಮದ್​ರನ್ನು ಡಾರ್​ನಲ್ಲಿದ್ದ ಅವರ ಮನೆಯ ಬಳಿ ಅಪಹರಿಸಿದ್ದ ಉಗ್ರರು ಹತ್ಯೆಗೈದಿದ್ದರು.

ಕಳೆದ ವಾರವಷ್ಟೇ ಕುಲ್​ಗಾಮ್​ ಎಂಬಲ್ಲಿ SPO ಪೊಲೀಸ್​ ಅಧಿಕಾರಿಯಾಗಿದ್ದ ಸಲೀಂ ಶಾಹ್​ ಎಂಬವರನ್ನೂ ಅಪಹರಿಸಿ ಹತ್ಯೆಗೈಯ್ಯಲಾಗಿತ್ತು. ಶುಕ್ರವಾರದಂದೂ ಓರ್ವ SPO ಜವಾನನ್ನು ಅಪಹರಿಸಲಾಗಿತ್ತು. ಆದರೆ ಆತನ ಕುಟುಂಬದ ಸದಸ್ಯರು ಬೇಡಿಕೊಂಡಿದ್ದರಿಂದ ಉಗ್ರರು ಆತನನ್ನು ಬಿಟ್ಟಿದ್ದರು.

ಕಾಶ್ಮೀರ ಮೂಲದ ಭಾರತೀಯ ಭದ್ರತಾ ಸಿಬ್ಬಂದಿಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಹತ್ಯೆಗಳ ಬಳಿಕ ಪೊಲೀಸರು ಯೋಧರ ಬಳಿ ತಮ್ಮ ಮನೆಗಳಿಗೆ ತೆರಳದಂತಿರಲು ಹಾಗೂ ಎಚ್ಚರವಹಿಸಲು ಸೂಚಿಸಿದ್ದರು. ವಿಶೇಷವಾಗಿ ದಕ್ಷಿಣ ಕಾಶ್ಮೀರದ ಪೊಲೀಸರಿಗೆ ಬಹಳಷ್ಟು ಎಚ್ಚರವಹಿಸುವಂತೆ ಸೂಚಿಸಲಾಗಿತ್ತು.

Comments are closed.