ರಾಷ್ಟ್ರೀಯ

ಮದುವೆ ಕುರಿತು ಸ್ಪಷ್ಟನೆ ನೀಡಿದ ನಟಿ ತಮನ್ನಾ!

Pinterest LinkedIn Tumblr


ಹೈದರಾಬಾದ್: ಮಿಲ್ಕಿ ಬ್ಯೂಟಿ ತಮನ್ನಾ ಭಾಟೀಯಾ ಅಮೆರಿಕದ ಡಾಕ್ಟರ್ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ತಮನ್ನಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಒಮ್ಮೆ ನಟ, ಮತ್ತೊಮ್ಮೆ ಕ್ರಿಕೆಟರ್ ಈಗ ಡಾಕ್ಟರ್.. ಇದನ್ನು ಕೇಳುತ್ತಿದ್ದರೆ ನಾನು ಪತಿಯ ಶಾಪಿಂಗ್ ಮಾಡುತ್ತಿದ್ದೇನೆ ಎಂದು ಅನ್ನಿಸುತ್ತಿದೆ. ನನ್ನ ಜೀವನದಲ್ಲಿ ಇತಂಹ ಸುದ್ದಿಗಳು ಹರಿದಾಡುತ್ತಿದೆ. ನಾನು ಇಂತಹ ಸುದ್ದಿಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ನಾನು ಈಗ ಸಿಂಗಲ್ ಆಗಿ ಖುಷಿಯಾಗಿದ್ದೇನೆ. ನನ್ನ ಪೋಷಕರು ಕೂಡ ನನ್ನ ಮದುವೆಗೆ ಹುಡುಗ ಹುಡುಕುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನಾನು ಈಗ ನನ್ನ ಸಿನಿಮಾಗಳನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನಾನು ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾಗ ಇತಂಹ ಸುದ್ದಿಗಳು ಹೇಗೆ ಹರಡುತ್ತದೆ ಎಂಬ ಆಶ್ಚರ್ಯವಾಗುತ್ತಿದೆ. ಇದು ಅಗೌರವ ತರುವಂತಹ ವಿಷಯ. ನಾನು ಮದುವೆ ಆಗುವುದಾದರೆ ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ. ಹಾಗಾಂತ ನೀವು ಈ ರೀತಿಯ ಗಾಸಿಪ್ ಗಳನ್ನು ಹರಡಿಸಬಾರದು. ಇದು ಯಾರೋ ಯೋಚಿಸಿಕೊಂಡು ಮಾಡುತ್ತಿರುವ ಗಾಸಿಪ್ ಎಂದು ತಮನ್ನಾ ಟ್ವೀಟ್ ಮಾಡಿದ್ದಾರೆ.

ವೈರಲ್ ಸುದ್ದಿ ಏನು?:
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅಮೆರಿಕದಲ್ಲಿರುವ ಡಾಕ್ಟರ್ ಒಬ್ಬರ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಅಮೆರಿಕದಲ್ಲಿರುವ ಎನ್‍ಆರ್‍ಐ ಡಾಕ್ಟರ್, ವೈದ್ಯ ವೃತ್ತಿ ಅಲ್ಲದೇ ಬೇರೆ ವ್ಯವಹಾರಗಳನ್ನು ಕೂಡ ಮಾಡುತ್ತಿದ್ದಾರೆ. ಇಬ್ಬರು ಒಬ್ಬರಿಗೊಬ್ಬರನ್ನು ಇಷ್ಟಪಡುತ್ತಿದ್ದು, ಶೀಘ್ರವೇ ಮದುವೆಯಾಗಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿತ್ತು. ಆದರೆ ತಮನ್ನಾ ಟ್ವೀಟ್ ಮಾಡಿ ಈ ಗಾಸಿಪ್‍ಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

ತಮನ್ನಾ ಈಗ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ `ಸೈರಾ ನರಸಿಂಹ ರೆಡ್ಡಿ’ ಹಾಗೂ ಹಿಂದಿಯ `ಕ್ವೀನ್’ ಚಿತ್ರದ ರಿಮೇಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Comments are closed.