ರಾಷ್ಟ್ರೀಯ

ಬಾಬರ, ಹುಮಾಯೂನನ ಪುತ್ರ ಎಂಬರ್ಥದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹೇಳಿಕೆ!

Pinterest LinkedIn Tumblr


ಜೈಪುರ: ಹೇಳಿಕೆ ನೀಡುವ ಭರದಲ್ಲಿ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಇತಿಹಾಸವನ್ನೇ ತಿರುಚಿದ್ದಾರೆ. ಬಾಬರ, ಹುಮಾಯೂನನ ಪುತ್ರ ಎಂಬರ್ಥದಲ್ಲಿ ಅವರು ನೀಡಿರುವ ಹೇಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಟೀಕೆ ವ್ಯಕ್ತವಾಗುತ್ತಿದೆ.

ರಕ್ಬರ್ ಖಾನ್ ಹತ್ಯೆ ಬಗ್ಗೆ ಪತ್ರಕರ್ತರೊಂದಿಗೆ ಮಾತನ್ನಾಡುತ್ತಿದ್ದ ಅವರು, ಪ್ರತಿಯೊಬ್ಬರು ಸಮಾಜ, ದೇಶ ಮತ್ತು ಧರ್ಮದ ನಂಬಿಕೆಗಳನ್ನು ಗೌರವಿಸಬೇಕು ಎಂದರು.

ಅವರ ಪ್ರಕಾರ ಸಾವನ್ನಪ್ಪುವ ಕೊನೆಕ್ಷಣದಲ್ಲಿ ಹುಮಾಯೂನ ಬಾಬರನಿಗೆ ಹೀಗೆ ಸಲಹೆಯನ್ನಿತ್ತದ್ದನಂತೆ- ” ನೀನು ಭಾರತವನ್ನು ಆಳಬೇಕೆಂದಿದ್ದರೆ ಗೋವು, ಬ್ರಾಹ್ಮಣ ಮತ್ತು ಮಹಿಳೆಯರ ಬಗ್ಗೆ ಜಾಗರೂಕನಾಗಿ ವರ್ತಿಸು. ಅವರ ಗೌರವಕ್ಕೆ ಕುಂದುಂಟಾಗದಂತೆ ನೋಡಿಕೋ. ಈ ಮೂರಕ್ಕೆ ಅಪಮಾನವಾಗಲೇ ಬಾರದು. ಭಾರತ ಇದನ್ನು ಸಹಿಸುವುದಿಲ್ಲ”.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮೊಘಲ್ ಸಾಮ್ರಾಟ ಬಾಬರ್ ಹುಮಾಯೂನನ ತಂದೆಯಾಗಿದ್ದು, 1530ರಲ್ಲಿ ಸಾವನ್ನಪ್ಪಿದ್ದ. ಪುತ್ರ ಹುಮಾಯೂನ 1556ರಲ್ಲಿ ಮೆಟ್ಟಿಲಿಂದ ಜಾರಿ ಬಿದ್ದು ಸಾವನ್ನಪ್ಪಿದ್ದ.

ಸೈನಿ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ.

ಇತಿಹಾಸವನ್ನು ತಪ್ಪು ತಪ್ಪುಗಾಗಿ ವ್ಯಾಖ್ಯಾನಿಸುವುದು ಬಿಜೆಪಿ ನಾಯಕರಿಗೆ ಚಟವಾಗಿ ಬಿಟ್ಟಿದೆ- ರಾಜಸ್ಥಾನ ಕಾಂಗ್ರೆಸ್ ಉಪಾಧ್ಯಕ್ಷೆ ಅರ್ಚನಾ ಶರ್ಮ.

Comments are closed.