ರಾಷ್ಟ್ರೀಯ

ನಿಖಾ ಹಲಾಲಾ ಹೆಸರಲ್ಲಿ ಪತ್ನಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಪತಿ

Pinterest LinkedIn Tumblr

ರಾಮ್‌ ಪುರ: ದೇಶಾದ್ಯಂತ ತ್ರಿವಳಿ ತಲಾಖ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಂತಯೇ, ಇದೇ ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲಾ ಹಸೆರಲ್ಲಿ ಪಾಪಿ ಪತಿಯೋರ್ವ ತನ್ನ ಪತ್ನಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ.

ಉತ್ತರ ಪ್ರದೇಶದ ರಾಮ್ ಪುರದಲ್ಲಿ ಈ ಘಟನ ನಡೆದಿದ್ದು, ನಿಖಾ ಹಲಾಲಾ ಹೆಸರಲ್ಲಿ ತನ್ನ ಮೇಲೆ ತನ್ನ ಪತಿ ಸೇರಿ ನಾಲ್ವರು ಸಾಮೂಹಿಕ ಅತ್ಯಾಚಾರಗೈದಿದ್ದಾರೆ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

ಆಕೆ ಆರೋಪಿಸಿರುವಂತೆ ತನ್ನ ಪತಿ ತ್ರಿವಳಿ ತಲಾಖ್‌ ನೀಡಿದ ಕೆಲ ತಿಂಗಳ ಬಳಿಕ ಮೂರು ತಿಂಗಳ ಮಟ್ಟಿಗೆ ಆಕೆ ಮತ್ತೊಬ್ಬರನ್ನು ವಿವಾಹವಾಗಿದ್ದರು. ತನ್ನ ಮಾಜಿ ಪತಿ ಮೂರು ತಿಂಗಳ ಬಳಿಕ ಮತ್ತೊಬ್ಬರನ್ನು ವಿವಾಹವಾಗಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

ಪ್ರಸ್ತುತ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.