ರಾಷ್ಟ್ರೀಯ

ರಾಹುಲ್​ ಒಬ್ಬರೇ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಯಲ್ಲ; ತೇಜಸ್ವಿ ಯಾದವ್​

Pinterest LinkedIn Tumblr


ಪಾಟ್ನಾ: ಲೋಕಸಭಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಹುದ್ದೆಗೆ ರಾಹುಲ್​ ಗಾಂಧಿ ಜೊತೆ ಇತರ ಮುಖಂಡರು ಕೂಡ ರೇಸ್​ನಲ್ಲಿದ್ದಾರೆ ಎಂದು ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್​ ಹೇಳಿಕೆ ನೀಡಿದ್ದಾರೆ.

ಎಲ್ಲ ಪಕ್ಷಗಳು ಸೇರಿ ಯಾರು ಪ್ರಧಾನಿ ಅಭ್ಯರ್ಥಿ ಯಾರಗಬೇಕು ಎಂಬ ಕುರಿತು ಚರ್ಚೆ ನಡೆಸಬೇಕು, ರಾಹುಲ್​ ಗಾಂಧಿ ಒಬ್ಬರೇ ಈ ಸ್ಪರ್ಧೆಯಲ್ಲಿ ಇಲ್ಲ ಎಂದು ಬಿಹಾರ ಮಾಜಿ ಉಪಮುಖ್ಯಮಂತ್ರಿ ಹೇಳಿಕೆ ನೀಡುವ ಮೂಲಕ ಪ್ರಧಾನಿ ಹುದ್ದೆ ಆಯ್ಕೆಯಲ್ಲಿ ಒಮ್ಮತದ ಅಭಿಪ್ರಾಯವಿಲ್ಲ ಎಂಬ ಮಾತು ಕೇಳಿಬಂದಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈ ಪಟ್ಟಿಯಲ್ಲಿದ್ದಾರೆ.

ಮೈತ್ರಿ ಕೂಟದಲ್ಲಿ ಯಾರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ, ಅವರಿಗೆ ನಮ್ಮ ಬೆಂಬಲವಿದೆ ಎಂದು ಆರ್​ಜೆಡಿ ಸ್ಪಷ್ಟಪಡಿಸಿದೆ.

ನಮ್ಮ ಸಂವಿಧಾನವನ್ನು ಕಾಪಾಡುವಂತಹ ನಾಯಕನನ್ನು ಆಯ್ಕೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದ್ದು, ಈ ನಾಯಕರಲ್ಲಿ ಬಹುಶಃ ರಾಹುಲ್​ ಗಾಂಧಿ ಕೂಡ ಒಬ್ಬರು. ಬಿಜೆಪಿಯೇತರ ಪಕ್ಷಗಳನ್ನು ರಾಹುಲ್​ ಗಾಂಧಿ ಒಟ್ಟುಗೂಡಿಸಬೇಕಿದೆ ಎಂದರು.

ಪ್ರಧಾನಿ ವಿಷಯಕ್ಕಿಂತ ಬೇರೆ ದೇಶದ ಜ್ವಲಂತ ವಿಷಯಗಳು ನಮ್ಮ ದೇಶದಲ್ಲಿದೆ ಎಂದು ಆರ್​ಜೆಡಿ ಮುಖ್ಯಸ್ಥ ತಿಳಿಸಿದ್ದಾರೆ.

Comments are closed.