
ನವದೆಹಲಿ: ಸ್ವಯಂಘೋಷಿತ ದೇವ ಮಹಿಳೆಯೊಬ್ಬರು ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸುತ್ತಿರುವ ಫೋಟೋ ವೈರಲ್ ಆಗಿದೆ.
ಈ ಫೋಟೋ ವೈರಲ್ ಆಗುತ್ತಿದ್ದಂತೆ ದೆಹಲಿಯ ಜನಕ್ ಪುರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಇಂದ್ರಪಾಲ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಪೊಲೀಸ್ ಸಮವಸ್ತ್ರ ಧರಿಸಿದ್ದ ಠಾಣಾಧಿಕಾರಿ ಇಂದ್ರಪಾಲ್ ಕುರ್ಚಿ ಮೇಲೆ ಕುಳಿತ್ತಿದ್ದು, ಸ್ವಯಂ ಘೋಷಿತ ದೇವ ಮಹಿಳೆ ನಮಿತಾ ಆಚಾರ್ಯ ಎಂಬಾಕೆ ಅಧಿಕಾರಿಯ ಹಿಂಭಾಗದಲ್ಲಿ ನಿಂತ ಆತನ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸುತ್ತಿರುವ ಫೋಟೋ ವೈರಲ್ ಆಗಿತ್ತು.
ಇನ್ನು ನಮಿತಾ ಆಚಾರ್ಯ ಸ್ವಯಂಘೋಷಿತ ದೇವ ಮಹಿಳೆಯಾಗಿದ್ದು ಈ ಹಿಂದೆಯೂ ಹಲವು ಸರ್ಕಾರಿ ಅಧಿಕಾರಿಗಳು ಹಾಗೂ ಐಪಿಎಸ್ ಅಧಿಕಾರಿಗಳ ಜೊತೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.
Comments are closed.