ರಾಷ್ಟ್ರೀಯ

54 ಸಾವಿರ ಯೋಧರ ನೇಮಕಕ್ಕೆ ಕೇಂದ್ರ ಅಸ್ತು!

Pinterest LinkedIn Tumblr


ನವದೆಹಲಿ: ಕೇಂದ್ರೀಯ ಭದ್ರತಾ ಪಡೆಗೆ ಅತಿದೊಡ್ಡ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ವರ್ಷ ಸಿಆರ್‌ಪಿಎಪ್‌, ಬಿಎಸ್‌ಎಫ್‌ ಮತ್ತು ಐಟಿಬಿಪಿಗಳಂತ ಸಶಸ್ತ್ರ ಮೀಸಲು ಪಡೆಗಳಿಗೆ ಸುಮಾರು 54,000 ಯೋಧರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ.

54,953 ಹುದ್ದೆಗಳನ್ನು ತುಂಬಲು ಸ್ಟಾಫ್​ ಸೆಲೆಕ್ಷನ್‌ ಕಮಿಟಿ(ಎಸ್‌ಎಸ್‌ಸಿ) ಮೂಲಕ ಜಾಹಿರಾತು ನೀಡಲಾಗಿದ್ದು, ದೇಶದ ಅತಿ ದೊಡ್ಡ ಪಡೆಯಾಗಿರುವ ಸಿಆರ್‌ಪಿಎಫ್​ನಲ್ಲಿ 21,566 ಗರಿಷ್ಟ ಹುದ್ದೆಗಳು ಖಾಲಿ ಇವೆ.

ಒಟ್ಟು 47,307 ಹುದ್ದೆಗಳನ್ನು ಖಾಲಿ ಇದ್ದು, ಅವರಲ್ಲಿ 7,646 ಮಹಿಳೆಯರು ಸೇರಿ ಪುರುಷ ಪೇದೆಗಳು ಸಾಮಾನ್ಯ ಡ್ಯೂಟಿ ಮೇಲೆ ಕೇಂದ್ರ ಮೀಸಲು ಪೊಲೀಸ್‌ ಪಡೆ, ಬಿಎಸ್‌ಎಫ್‌, ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌, ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌, ಸಶಸ್ತ್ರ ಸೀಮಾ ಬಲ್‌, ಅಸ್ಸಾಂ ರೈಫಲ್ಸ್‌, ರಾಷ್ಟ್ರೀಯ ತನಿಖಾ ದಳ ಮತ್ತು ಸೆಕ್ರೇಟರಿಯಟ್ ಸೆಕ್ಯುರಿಟಿ ಫೋರ್ಸ್‌ಗಳಿಗೆ ನೇಮಕವಾಗಲಿದ್ದಾರೆ.

ಅರ್ಹತೆಗಳೇನು?

ಅರ್ಜಿದಾರರ ವಯಸ್ಸು 18 ರಿಂದ 23 ವರ್ಷದವರಾಗಿರಬೇಕು. 10ನೇ ತರಗತಿ ಪೂರ್ಣಗೊಂಡಿರಬೇಕು. ಇವುಗಳೊಂದಿಗೆ ಮೀಸಲಾತಿ

ಆಧಾರದ ಮೇಲು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಎಸ್‌ಎಸ್‌ಸಿಯಲ್ಲಿ ತಿಳಿಸಿರುವಂತೆ ಆಯ್ಕೆಯಾದವರಿಗೆ ತಿಂಗಳಿಗೆ 21,700-69,100 ವೇತನವಿದೆ.

ಅಭ್ಯರ್ಥಿಗಳು ಕಂಪ್ಯೂಟರ್‌ ಆಧಾರಿತ ಪರೀಕ್ಷೆ ತೆಗೆದುಕೊಳ್ಳಬೇಕು. ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಪ್ರಮಾಣ ಪರೀಕ್ಷೆ ಮತ್ತು ಅಂತಿಮ ವೈದ್ಯಕೀಯ ಪರೀಕ್ಷೆಯನ್ನು ಎದುರಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್‌ 20.

ಸಿಎಪಿಎಫ್‌ ನೇಮಿಸಿಕೊಂಡವರನ್ನು ಗಡಿ ರಕ್ಷಣೆ, ನಕ್ಸಲ್‌ ವಿರೋಧಿ ಕಾರ್ಯಾಚರಣೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ದೇಶಾದ್ಯಂತ ವಿವಿಧ ಭದ್ರತಾ ಕಾರ್ಯವನ್ನು ಹೊರತುಪಡಿಸಿ ಮೂಲಸೌಕರ್ಯ ಮತ್ತು ಹೆಚ್ಚಿನ ಮೌಲ್ಯದ ಸ್ವತ್ತುಗಳ ರಕ್ಷಣೆಗೆ ನಿಯೋಜಿಸಲಾಗುತ್ತದೆ.

ಎನ್ಐಎ ಎಂಬುದು ಫೆಡರಲ್ ಭಯೋತ್ಪಾದನಾ ತನಿಖಾ ಸಂಸ್ಥೆಯಾಗಿದೆ ಮತ್ತು ಎಸ್ಎಸ್ಎಫ್ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತದೆ.

Comments are closed.