ರಾಷ್ಟ್ರೀಯ

ಎಲ್ಲಾ ವಾಹನಗಳಿಗೆ ಥರ್ಡ್​ ಪಾರ್ಟಿ ವಿಮೆ ಕಡ್ಡಾಯ; ಸುಪ್ರೀಂ​ಕೋರ್ಟ್ ಆದೇಶ

Pinterest LinkedIn Tumblr


ನವದೆಹಲಿ: ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳಿಗೂ ಥರ್ಡ್​ ಪಾರ್ಟಿ ವಿಮೆ ಕಡ್ಡಾಯ ಎಂದು ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ. ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಮೃತಪಟ್ಟರೆ ಆತನ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಹೀಗಾಗಿ ಥರ್ಡ್​ ಪಾರ್ಟಿ ವಿಮೆ ಕಡ್ಡಾಯ ಎಂದು ಸುಪ್ರೀಂಕೋರ್ಟ್​ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್ ರಚಿಸಿರುವ ರಸ್ತೆ ಸುರಕ್ಷತಾ ಸಮಿತಿಯು ಸಾರಿಗೆ ಇಲಾಖೆಗೆ ರಾಜ್ಯದಲ್ಲಿ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಎಂದು ಸೂಚಿಸಿದೆ. ಅಲ್ಲದೇ ರಸ್ತೆ ಅಪಘಾತದಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಮೃತರಾಗುತ್ತಿದ್ಧಾರೆ ಎಂದು ಸಮಿತಿ ವರದಿ ಹೇಳುತ್ತಿದೆ.

ನಿವೃತ್ತ ನ್ಯಾಯಮೂರ್ತಿ ಕೆ.ಎಸ್​ ರಾಧಕೃಷ್ಣನ್​​ ನೇತೃತ್ವದ ನ ಸಮಿತಿಯೂ ಯಾವುದೇ ಕಂಪನಿಯೂ ತನ್ನ ಗ್ರಾಹಕರಿಗೆ ದ್ವಿಚಕ್ರ ಮತ್ತು ಇತರೆ ವಾಹನಗಳನ್ನು ಮಾರಾಟ ಮಾಡುವಾಗ ಥರ್ಡ್​ ಪಾರ್ಟಿ ವಿಮೆ ಕಡ್ಡಾಯಗೊಳಿಸಬೇಕು. ಅಲ್ಲದೇ ಥರ್ಡ್​ ಪಾರ್ಟಿ ವಿಮೆಯನ್ನು ಒಂದು ವರ್ಷದ ಬದಲಿಗೆ, 3 ಮತ್ತು 5 ವರ್ಷಕ್ಕೆ ಮಾಡಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಪ್ರತಿನಿತ್ಯ ರಸ್ತೆಗಳಲ್ಲಿ 18 ಕೋಟಿಯಷ್ಟು ವಾಹನಗಳು ಸಂಚಾರ ಮಾಡುತ್ತವೆ. ಅದರಲ್ಲಿ ಕೇವಲ 6 ಕೋಟಿ ವಾಹನಗಳಿಗೆ ಮಾತ್ರ ಥರ್ಡ್​ ಪಾರ್ಟಿ ವಿಮೆ ಮಾಡಿಸಲಾಗಿದೆ. ಹೀಗಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಮೃತ ವ್ಯಕ್ತಿಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಪರಿಹಾರಕೊಸ್ಕರವಲ್ಲದೇ ಬದುಕುವ ಸಲುವಾಗಿ ಥರ್ಡ್​ ಪಾರ್ಟಿ ವಿಮೆಯನ್ನು ಮಾಡಿಸಿ ಎಂದು ಸಮಿತಿ ತಿಳಿಸಿದೆ.

ಈ ಹಿಂದೆಯೂ ಸುಪ್ರೀಂಕೋರ್ಟ್​ವಿಮಾ ಪಾಲಿಸಿ ಜತೆ ಆಧಾರ್ ಜೋಡಣೆ ಕೊನೆ ದಿನಾಂಕ ವಿಸ್ತರಣೆ ರಾಜ್ಯದಲ್ಲಿರುವ ಪ್ರತಿ ವಾಹನಗಳಿಗೂ ಥರ್ಡ್ ಪಾರ್ಟಿ ವಿಮೆ ಇರಲೇ ಬೇಕು. ಒಂದು ವೇಳೆ ಇಲ್ಲದಿದ್ದರೆ ತಪಾಸಣೆ ವೇಳೆ ವಾಹನ ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಸಮಿತಿ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.

Comments are closed.