ರಾಷ್ಟ್ರೀಯ

ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಕಾಂಗ್ರೆಸ್, ಬಿಜೆಪಿ ಬೆವರಿಳಿಸಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ! ಖ್ಯಾತ ತೆಲುಗು ಚಿತ್ರನಟ ಇವರಿಗಿರುವ ಸಂಬಂಧವೇನು…?

Pinterest LinkedIn Tumblr

ನವದೆಹಲಿ: ದೇಶಾದ್ಯಂತ ಟಿಡಿಪಿಯ ಅವಿಶ್ವಾಸ ನಿರ್ಣಯದ ಕುರಿತು ಭಾರಿ ಚರ್ಚೆಗಳಾಗುತ್ತಿರುವಂತೆಯೇ, ಸಂಸತ್ ನಲ್ಲಿ ಟಿಡಿಪಿ ಪರವಾಗಿ ಅವಿಶ್ವಾಸ ನಿರ್ಣಯದ ಕುರಿತು ಮಾತನಾಡಿದ ಸಂಸದ ಗಲ್ಲಾ ಜಯದೇವ್ ಅವರು ಗಮನ ಸೆಳೆದಿದ್ದಾರೆ.

ಇಷ್ಟಕ್ಕೂ ಯಾರು ಈ ಗಲ್ಲಾ ಜಯದೇವ್?
ಗಲ್ಲಾ ಜಯದೇವ್ ಟಿಡಿಪಿ ಪಕ್ಷದ ಸಂಸದರಾಗಿದ್ದು. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಸಂಸದರಾಗಿದ್ದಾರೆ. ಗಲ್ಲಾ ಜಯದೇವ್ ಅವರು ಮೂಲತಃ ಉದ್ಯಮಿಗಳಾಗಿದ್ದು, ಆಂಧ್ರ ಪ್ರದೇಶದ ಖ್ಯಾತ ಅಮರರಾಜ್ ಗ್ರೂಪ್ ನ ಮ್ಯಾನೇಜಿಂಗ್ ಡೈರಕ್ಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅಂತೆಯೇ ಭಾರತದಲ್ಲಿ ಅತ್ಯಂತ ಪ್ರಭಾವಿ ಮತ್ತು ಉತ್ತಮ ಸಿಇಒಗಳ ಪೈಕಿ ಒಬ್ಬರಾಗಿದ್ದಾರೆ. ಇನ್ನು ಕಳೆದ ಲೋಕಸಭಾ ಚುನಾವಣೆ ವೇಳೆ ತೆಲುಗುದೇಶಂ ಪಕ್ಷದ ಪರ ನಾಮಪತ್ರ ಸಲ್ಲಿಕೆ ಮಾಡಿದ್ದ ಗಲ್ಲಾ ಜಯದೇವ್ ಅವರು, ತಮ್ಮ ಬಳಿ 683ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.

ಸದನದಲ್ಲಿ ಅತ್ಯಂತ ಕ್ರಿಯಾಶೀಲ ಸಂಸದ
ಸಂಸದ ಗಲ್ಲಾ ಜಯದೇವ್ ಸದನದಲ್ಲಿ ಅತ್ಯಂತ ಕ್ರಿಯಾಶೀಲ ಸಂಸದರು ಎಂದು ಗುರುತಿಸಿಕೊಂಡಿದ್ದು, ಸದನದಲ್ಲಿ ಶೇ.84ರಷ್ಟು ಹಾಜರಾತಿ ಹೊಂದಿದ್ದಾರೆ. ಆ ಮೂಲಕ ಅತೀ ಹೆಚ್ಚು ಹಾಜರಾತಿ ಹೊಂದಿರುವ ಸಂಸದರಲ್ಲಿ ಗಲ್ಲಾ ಜಯದೇವ್ ಕೂಡ ಒಬ್ಬರಾಗಿದ್ದಾರೆ.

ಖ್ಯಾತ ಚಿತ್ರನಟ ಸೂಪರ್ ಸ್ಚಾರ್ ಕೃಷ್ಣ ಅವರ ಅಳಿಯ
ಇನ್ನು ಗಲ್ಲಾ ಜಯದೇವ್ ಅವರು ತೆಲುಗು ಚಿತ್ರರಂಗದ ಸೂಪರ್ ಸ್ಚಾರ್ ಕೃಷ್ಣ ಅವರ ಅಳಿಯರಾಗಿದ್ದಾರೆ. ಕೃಷ್ಣ ಅವರ ಪದ್ಮಾವತಿ ಘಟ್ಟಮನೇನಿ ಅವರನ್ನು ಗಲ್ಲಾ ಜಯದೇವ್ 1991ರ ಜೂನ್ ತಿಂಗಳಲ್ಲಿ ವರಿಸಿದ್ದರು. ಪದ್ಮಾವತಿ ಹಾಲಿ ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಅವರ ಹಿರಿಯ ಸಹೋದರಿಯಾಗಿದ್ದಾರೆ. ಈ ಹಿಂದೆ ಇದೇ ಮಹೇಶ್ ಬಾಬು ಅವರ ಭರತ್ ಅನೇ ನೇನು ಚಿತ್ರದ ಆಡಿಯೋ ಬಿಡುಗಡೆ ವೇಳೆಯಲ್ಲೂ ಗಲ್ಲಾ ಜಯದೇವ್ ಉಪಸ್ಥಿತರಿದ್ದರು.

Comments are closed.