ರಾಷ್ಟ್ರೀಯ

ಕೇರಳ ಚರ್ಚ್ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಇಬ್ಬರು ಪಾದ್ರಿಗಳ ಜಾಮೀನು ಅರ್ಜಿ ವಜಾ

Pinterest LinkedIn Tumblr

ತಿರುವಳ್ಳ(ಕೇರಳ): ಅತ್ಯಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಮಲಂಕರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ನ ಇಬ್ಬರು ಪಾದ್ರಿಗಳ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಮಲಂಕರ ಚರ್ಚ್ ನ ಲೈಂಗಿಕ ಹಗರಣದ ನಾಲ್ವರು ಆರೋಪಿಗಳ ಪೈಕಿ ಕಳೆದ ವಾರ ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳಾದ ಪಾದ್ರಿ ಜಾನ್ಸನ್ ವಿ. ಮ್ಯಾಥೀವ್‌ ಹಾಗೂ ಫಾದರ್ ಜಾಬ್ ಮ್ಯಾಥ್ಯೂ ಅವರು ಜಾಮೀನು ಕೋರಿ ತಿರುವಳ್ಳ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಕ್ರೈಸ್ತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪ ಇವರ ಮೇಲಿದೆ.

ಪ್ರಕರಣದ ಇತರೆ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬುಧವಾರ ನ್ಯಾಯಾಲಯ ತಿರಸ್ಕರಿಸಿದೆ.

ಘಟನೆ ಸಂಬಂಧ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಬೇಕಾಗಿದ್ದು ಫಾದರ್ ಅಬ್ರಹಾಂ ವರ್ಗೀಸ್ ಅಲಿಯಾಸ್ ಸೋನಿ ಹಾಗೂ ಫಾದರ್ ಜಾರ್ಜ್ ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಎರಡನೇ ಆರೋಪಿಯಾಗಿರುವ ಪಾದ್ರಿ ಜಾಬ್ ಮ್ಯಾಥೀವ್ ಕೊಲ್ಲಂ ಪೊಲೀಸರರೆದುರು ಶರಣಾಗಿದ್ದರು.

ಪ್ರಕರಣದಲ್ಲಿ ಮೂವರು ಪಾದ್ರಿಗಳ ವಿರುದ್ಧ ಸೆಕ್ಷನ್ 376 ಅತ್ಯಾಚಾರ ಕೇಸ್ ಹಾಕಲಾಗಿದ್ದು, ಜಾನ್ಸನ್‌ ವಿರುದ್ಧ ಮಾತ್ರ ಕೇವಲ ಸೆಕ್ಷನ್ 354 ಅಡಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಸಲಾಗಿದೆ.

Comments are closed.