ರಾಷ್ಟ್ರೀಯ

ನಂಬರ್‌ ಪ್ಲೇಟ್‌ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಕಾರ್‌ಗೂ ಕಡ್ಡಾಯ: ದೆಹಲಿ ಹೈ ಕೋರ್ಟ್‌

Pinterest LinkedIn Tumblr


ದೆಹಲಿ: ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಕಾರ್‌ಗೂ ಕಡ್ಡಾಯವಾಗಿ ಬಂಬರ್‌ ಪ್ಲೇಟ್‌ ಅಳವಡಿಸಬೇಕು ಎಂದು ಬುಧವಾರ ದೆಹಲಿ ಹೈಕೋರ್ಟ್‌ ಮಹತ್ವದ ತರ್ಪು ನೀಡಿದೆ.

ದೇಶದ ಉನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಮುಂತಾದವರ ವಾಹನಗಳನ್ನು ಕೂಡ ನೋಂದಣಿ ಮಾಡಿ ನಂಬರ್‌ ಪ್ಲೇಟ್‌ ಕಾಣುವಂತೆ ಅಳವಡಿಸಬೇಕು ಎಂದು ಆದೇಶ ನೀಡಿದೆ. ಈ ಹಿಂದೆ ದೇಶದ ಪ್ರಮುಖ ವ್ಯಕ್ತಿಗಳ ಕಾರ್‌ ಮುಂದೆ ನಂಬರ್‌ ಪ್ಲೇಟ್‌ ಬದಲು ರಾಷ್ಟ್ರ ಲಾಂಛನ ಅಳವಡಿಸಲಾಗುತ್ತಿತ್ತು. ಆದರೆ ಇದರಿಂದ ಸುಲಭವಾಗಿ ಕಾರ್‌ಗಳನ್ನು ಗುರುತಿಸಬಹುದಾಗಿದ್ದು, ಉಗ್ರದಾಳಿಗಳೂ ಸುಲಭವಾಗಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ರಾಷ್ಟ್ರಪತಿ ಸಹಿತ ಎಲ್ಲಾ ಗಣ್ಯರ ಕಾರ್‌ಗೆ ನಂಬರ್‌ ಪ್ಲೇಟ್‌ ಅಳವಡಿಸಬೇಕು ಎಂದು. ವಾಹನಗಳನ್ನು ನೋಂದಣಿ ಮಾಡದಿದ್ದರೆ ಮೋಟಾರ್‌ ವಾಹನ ಕಾಯಿದೆಯನ್ನು ಉಲ್ಲಂಘಿಸಿದ ಹಾಗೆ ಆಗುತ್ತದೆ ಎಂದು ಸರಕಾರೇತರ ಸಂಸ್ಥೆ ದೆಹಲಿ ಹೈ ಕೋರ್ಟ್‌‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅಲ್ಲದೇ ನೋಂದಣಿ ಮಾಡದ ಕಾರುಗಳು ಅಪಘಾತಕ್ಕೀಡಾದರೆ ಅಂಥ ವಾಹನಗಳಿಗೆ ಇನ್ಶೂರೆನ್ಸ್ ಸೌಲಭ್ಯ ಕೂಡ ಇರುವುದಿಲ್ಲ.ಹಾಗಾಗಿ ಅವುಗಳನ್ನು ನೋಂದಣಿ ಮಾಡಲು ಆದೇಶ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಕಡ್ಡಾಯವಾಗಿ ನಂಬರ್‌ ಪ್ಲೇಟ್‌ ಅಳವಡಿಸಬೇಕು ಎಂದು ತೀರ್ಪು ನೀಡಿದೆ.

Comments are closed.