ರಾಷ್ಟ್ರೀಯ

ದೇಶದ ಸೇವೆಗಾಗಿಯೇ ನನ್ನ ತಂದೆ ಜೀವಿಸಿ, ಸಾವನ್ನಪ್ಪಿದ್ದಾರೆ: : ರಾಹುಲ್ ಗಾಂಧಿ

Pinterest LinkedIn Tumblr

ನವದೆಹಲಿ: ವೆಬ್ ಸಿರೀಸ್ ಸೇಕ್ರೆಡ್ ಗೇಮ್ಸ್ ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಅವಹೇಳನ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ತಂದೆ ಭಾರತದ ಸೇವೆಗಾಗಿಯೇ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.

ಭಾರತದ ಸೇವೆಗಾಗಿಯೇ ನನ್ನ ತಂದೆ ಜೀವಿಸಿದ್ದರು ಮತ್ತು ಮರಣಿಸಿದರು. ವೆಬ್ ಸರಣಿಯ ಕಾಲ್ಪನಿಕ ಪಾತ್ರ ನನ್ನ ತಂದೆಯ ಮೇಲಿನ ದೃಷ್ಟಿಕೋನವನ್ನು ಎಂದಿಗೂ ಬದಲಾಯಿಸದು ಎಂದು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಮತ್ತು ಬಿಜೆಪಿ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಪಾಲಿಸಬೇಕು ಮತ್ತು ನಿಯಂತ್ರಿಸಬೇಕು ಎಂದು ನಂಬುತ್ತದೆ. ಆದರೆ ನಾನು ಸ್ವಾತಂತ್ರ್ಯವೂ ಮೂಲಭೂತ ಪ್ರಜಾಪ್ರಭುತ್ವದ ಹಕ್ಕು ಎಂದು ನಾನು ನಂಬುತ್ತೇನೆ ಎಂದು ಟ್ವೀಟಿಸಿದ್ದಾರೆ.

ಸೇಕ್ರೇಡ್ ಗೇಮ್ಸ್ ನಲ್ಲಿ ರಾಜೀವ್ ಗಾಂಧಿ ವಿರುದ್ಧ ನಿಂದನೀಯ ಪದ ಬಳಸಲಾಗಿದೆ. ಈ ದೃಶ್ಯಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿದ್ದು ಅರ್ಜಿಯ ವಿಚಾರಣೆ ನಡೆಯಲಿದೆ.

ನೆಟ್ ಫ್ಲಿಕ್ಸ್, ವೆಬ್ ಸಿರೀಸ್ ನ ನಿರ್ಮಾಪಕರು ಹಾಗೂ ನಟ ನವಾಜುದ್ದೀನ್ ವಿರುದ್ದ ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕ ರಾಜೀವ್ ಕುಮಾರ್ ಸಿನ್ಹಾ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

Comments are closed.