ರಾಷ್ಟ್ರೀಯ

ಗ್ರಾಮಗಳಲ್ಲಿ ಮೂಢನಂಬಿಕೆ ಪ್ರೋತ್ಸಾಹಿಸುತ್ತಿದ್ದ 7 ಮಂದಿ ಸೆರೆ

Pinterest LinkedIn Tumblr


ಮೇದಿನೀನಗರ, ಜಾರ್ಖಂಡ್‌ : ಪಲಮಾವೂ ಜಿಲ್ಲೆಯ ಜಮೂನೆ ಗ್ರಾಮದ ಜನರಲ್ಲಿ ಮೂಢನಂಬಿಕೆಯನ್ನು ಪ್ರೋತ್ಸಾಹಿಸುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾನಸಿಕ ಅಸ್ವಸ್ಥನೆಂದು ಈ ಆರೋಪಿಗಳಿಂದಲೇ ಘೋಷಿಸಲ್ಪಟ್ಟಿದ್ದ ಮನ್‌ರೂಪ್‌ ಭೂಯಿಯಾನ್‌ ಕೊಟ್ಟ ದೂರಿನ ಪ್ರಕಾರ ಪೊಲೀಸರು ಮೂಢನಂಬಿಕೆಯನ್ನು ಜನರಲ್ಲಿ ಪ್ರೋತಾಹಿಸುವುದರಲ್ಲಿ ನಿರತರಾಗಿದ್ದ ಈ ಏಳು ಮಂದಿಯನ್ನು ಬಂಧಿಸಿದರು ಎಂದು ಎಸ್‌ಪಿ ಇಂದ್ರಜಿತ್‌ ಮಹಾತಿಯಾ ತಿಳಿಸಿದ್ದಾರೆ.

ಮನ್‌ರೂಪ್‌ ಮಾನಸಿಕ ಅಸ್ವಸ್ಥನೆಂದು ಹೇಳಿದ್ದ ಆರೋಪಿಗಳು ಆತನನ್ನು ಓಝಾ ಎಂಬ ನಕಲಿ ವೈದ್ಯನೊಂದಿಗೆ ಗಢವಾಹ್‌ಗೆ ಚಿಕಿತ್ಸೆಗೆಂದು ಒಯ್ದಿದ್ದರು; ಆದರೆ ಮನ್‌ರೂಪ್‌ ಅವರ ಕೈಯಿಂದ ತಪ್ಪಿಸಿಕೊಂಡು ಬಂದು ಮೇದಿನೀನಗರದಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದ ಎಂದು ಎಸ್‌ಪಿ ಹೇಳಿದರು.

Comments are closed.