ರಾಷ್ಟ್ರೀಯ

ಕುಡಿಯಲು ನೀರು ಕೇಳಿದವನನ್ನು ಆತನ ಹೆಂಡತಿ ಎದುರೇ ಇರಿದು ಕೊಂದ ಗೆಳೆಯ!

Pinterest LinkedIn Tumblr


ಹೊಸದಿಲ್ಲಿ : ಕುಡಿಯಲು ತಣ್ಣೀರು ತಂದು ಕೊಡುವಂತೆ ಕೇಳಿಕೊಂಡ 20ರ ಹರೆಯದ ತರುಣನನ್ನು ಆತನ ಪತ್ನಿಯ ಮುಂದೆಯೇ ಬರ್ಬರವಾಗಿ ಆತನ ಮಿತ್ರನು ಇರಿದು ಕೊಂದ ಘಟನೆ ವಾಯವ್ಯ ದಿಲ್ಲಿಯ ಭರತ್‌ ನಗರ್‌ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಹಾಂಗೀರ್‌ಪುರಿಯ ನಿವಾಸಿಯಾಗಿರುವ ಸಾಗರ್‌ ತನ್ನ ಪತ್ನಿಯ ಜತೆಗೆ ಮಿತ್ರರನ್ನು ಕಾಣಲೆಂದು ಜು.11-12ರ ನಡುವಿನ ರಾತ್ರಿ ಜೆಜೆ ಕಾಲನಿಗೆ ಹೋಗಿದ್ದ. ಆಗ ಅಲ್ಲಿದ್ದ ತನ್ನ ಮಿತ್ರ ಗೌರವ್‌ಗೆ ತನಗೆ ಕುಡಿಯಲು ತಣ್ಣೀರು ತಂದು ಕೊಡುವಂತೆ ಕೇಳಿಕೊಂಡಿದ್ದ.

ಆದರೆ ಅದೇಕೋ ಗೌತಮ್‌ಗೆ ಸಾಗರ್‌ ಮೇಲೆ ವಿಪರೀತ ಕೋಪ ಬಂತು. ಉಭಯತರ ನಡುವೆ ಜಗಳವೂ ಆಯಿತು. ಇದರ ಪರಾಕಾಷ್ಠೆಯಲ್ಲಿ ಗೌರವ್‌, ಮಿತ್ರ ಸಾಗರ್‌ನನ್ನು ಆತನ ಪತ್ನಿಯ ಎದುರೇ ಹಲವು ಬಾರಿ ಇರಿದು ಕೊಂದ ಎಂದು ಪೊಲೀಸರು ತಿಳಿಸಿದ್ದಾರೆ.

ಮಿತ್ರನನ್ನು ಕೊಂದ ಬಳಿಕ ಪರಾರಿಯಾಗಿರುವ ಗೌರವ್‌ ನನ್ನು ಪೊಲೀಸರು ಶೋಧಿಸುತ್ತಿದ್ದಾರೆ. ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.