ರಾಷ್ಟ್ರೀಯ

ಫೇಸ್‌ಬುಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಲೈವ್‌ ಸ್ಟ್ರೀಮ್‌: 2,750 ಮಂದಿಯಿಂದ ವೀಕ್ಷಣೆ!

Pinterest LinkedIn Tumblr


ಆಗ್ರ: ಫೇಸ್‌ಬುಕ್‌ನಲ್ಲಿ ಕಾರ್ಯಕ್ರಮ, ಪ್ರವಾಸದ ಕ್ಷಣಗಳನ್ನು ಲೈವ್‌ ಮಾಡುವುದು ಹೊಸ ಟ್ರೆಂಡ್‌ ಆದಂತೆಯೇ, ಯುವಕನೋರ್ವ ಆತ್ಮಹತ್ಯೆ ತಾನು ಮಾಡಿಕೊಳ್ಳುವುದನ್ನೂ ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಿ ಪ್ರಾಣಬಿಟ್ಟಿದ್ದಾನೆ. ಅಷ್ಟು ಮಾತ್ರವಲ್ಲ…

ಲೈವ್‌ ಆತ್ಮಹತ್ಯೆಯನ್ನು ಸುಮಾರು 2,750 ಮಂದಿ ವೀಕ್ಷಿಸಿದ್ದರೂ, ಒಬ್ಬರೂ ಹುಡುಗನ ಕುಟುಂಬಕ್ಕೆ ಸುದ್ದಿ ಮುಟ್ಟಿಸುವ ಪ್ರಯತ್ನ ಮಾಡಿಲ್ಲ.

24 ವರ್ಷದ ಮುನ್ನಾ ಕುಮಾರ್‌, ತನ್ನ ಪೋಷಕರ ಆಸೆಯಂತೆ ಸೈನ್ಯ ಸೇರುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಫೇಸ್‌ಬುಕ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಒಂದು ನಿಮಿಷದ ವೀಡಿಯೋ ಲೈವ್‌ ಆಗಿದೆ.

5 ಬಾರಿ ಸೈನ್ಯ ಸೇರಲು ಪರೀಕ್ಷೆ ಬರೆದಿದ್ದ ಮುನ್ನ ಕುಮಾರ್‌, ತೇರ್ಗಡೆಯಾಗಿಲ್ಲ. ಇದರಿಂದ ಬೇಸತ್ತ ಮುನ್ನ, ಬುಧವಾರ ಬೆಳಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯುವ ಸನ್ನಿವೇಶವನ್ನು ನೋಟ್‌ ಬರೆದಿರುವ ಯುವಕ, ತನ್ನನ್ನು ತಾನೇ ದೋಷಿ ಎಂದು ಪರಿಗಣಿಸಿದ್ದಾನೆ. ಸ್ವಾತಂತ್ರ್ಯ ಸೇನಾನಿ ಭಗತ್‌ ಸಿಂಗ್‌ನಿಂದ ಪ್ರೇರಣೆ ಪಡೆದಿದ್ದ. ಸೈನ್ಯ ಸೇರುವುದು ಆತನ ಗುರಿಯಾಗಿತ್ತು. ಮಂಗಳವಾರ ರಾತ್ರಿ ಎಂದಿನಂತಯೇ ಇದ್ದ. ನಾವು ಜತೆಗೆ ಊಟ ಮಾಡಿದ್ದೆವು. ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬ ಊಹೆಯೂ ಇರಲಿಲ್ಲ ಎಂದು ಸಹೋದರ ವಿಕಾಸ್‌ ಕುಮಾರ್‌ ಹೇಳಿದ್ದಾರೆ. ಮುನ್ನ ತಂದೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಮಗನಿಗಾಗಿ ದಿನಸಿ ಅಂಗಡಿ ತೆರೆದುಕೊಟ್ಟಿದ್ದರು ಎಂದು ತಿಳಿದು ಬಂದಿದೆ.

Comments are closed.