ರಾಷ್ಟ್ರೀಯ

ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ನಮಾಜ್‌, ಕುರಾಣ್‌ ಪಠಣ: ಆರೆಸ್ಸೆಸ್‌ ಆಯೋಜನೆ

Pinterest LinkedIn Tumblr

ನವದೆಹಲಿ: ಅಯೋಧ್ಯೆ ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗು ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ.

ವಿಶೇಷವೆಂದರೆ ರಾಷ್ಟ್ರೀಯ ಸ್ವಯಂಸೇವಾ ಸಂಘ ಹಾಗೂ ಅದರ ಮುಸ್ಲಿಮ್ ವಿಭಾಗ – ರಾಷ್ಟ್ರೀಯ ಮುಸ್ಲಿಂ ಮಂಚ್ ಈ ಕಾರ್ಯಕ್ರಮ ಆಯೋಜನೆ ಮಾಡಲಿದೆ. ಈ ಬೃಹತ್ ಪ್ರಾರ್ಥನೆ, ಕುರಾನ್ ಪಠಣ ಕಾರ್ಯಕ್ರಮವು ಇದೇ ಜುಲೈ 12 ನಡೆಯಲಿದೆ.

ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಮುಸ್ಲಿಮ್ ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸೂಫಿ ಸಂತರ ಸಮಾಧಿಗಳಿಗೆ ಸಹ ಅವರು ತೆರಳಲಿದ್ದಾರೆ.

ಉಲೇಮಾಗಳು ಮೊದಲಿಗೆ ವಾಝು (ಶುದ್ಧೀಕರಣ) ನಡೆಸಿ ನಂತರ ನಮಾಜ್ ನೆರವೇರಿಸುವರು. ಬಳಿಕ ಪವಿತ್ರ ಕುರಾನ್ ನ ಶ್ಲೋಕಗಳನ್ನು 5 ಲಕ್ಷ ಬಾರಿ ಪಠಿಸಲಾಗುವುದು. ಸರಯೂ ನದಿ ದಂಡೆಯ ರಾಮ್ ಕಿ ಪೈದಿ ಘಾಟ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವು ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಿದೆ. ಹಾಗೆಯೇ ಆರ್ ಎಸ್ ಎಸ್ ತಾನು ಮುಸ್ಲಿಂ ವಿರೋಧಿ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಸಹಕಾರಿಯಾಗಿದೆ ಎಂದು ಭಾವಿಸಲಾಗುತ್ತಿದೆ.

Comments are closed.